ದಂತವೈದ್ಯನ ಎಡವಟ್ಟು! ಹಲ್ಲು ಕೀಳಿಸಲು ಬಂದಿದ್ದ ಮಹಿಳೆ ಬಲಿ...
ಹಲ್ಲು ಕೀಳಿಸಲು ಹೋದ ಮಹಿಳೆಯೊಬ್ಬರು ವೈದ್ಯರ ಎಡವಟ್ಟಿನಿಂದಾಗಿ ಕ್ಲಿನಿಕ್‌ನಲ್ಲೇ ಪ್ರಾಣ ಬಿಟ್ಟಂತಹ ಆಘಾತಕಾರಿ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ. ಹಲ್ಲು ಕೀಳಿಸಲು ಹೋದ ಮಹಿಳೆಯೊಬ್ಬರು ವೈದ್ಯರ ಎಡವಟ್ಟಿನಿಂದಾಗಿ ಕ್ಲಿನಿಕ್‌ನಲ್ಲೇ ಪ್ರಾಣ ಬಿಟ್ಟಂತಹ ಆಘಾತಕಾರಿ ಘಟನೆ ನಡೆದಿದೆ. ಘಟನೆಯ ನಂತರ ಆರೋಪಿ ವೈದ್ಯ ಪರಾರಿಯಾಗಿದ್ದು, ಮಹಿಳೆಯ ಪತಿ ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 35 ವರ್ಷದ ಮಹಿಳೆ ಬಿಜಂತಿ ದೇವಿಯವರಿಗೆ ಕೆಲ ದಿನಗಳಿಂದ ಹಲ್ಲು ನೋವು ಕಾಣಿಸಿಕೊಂಡಿದ್ದು, ಇದಕ್ಕೊಂದು ಮುಕ್ತಿ ನೀಡುವುದಕ್ಕಾಗಿ ಅವರು ಹಲ್ಲನ್ನು ಕೀಳಿಸಲು ನಿರ್ಧರಿಸಿ ಹರಿಹರಗಂಜ್‌ನಲ್ಲಿರುವ ಖಾಸಗಿ ಡೆಂಟಲ್ ಕ್ಲಿನಿಕ್ ಆದ ಜನತಾ ದಂತ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರಿಗೆ ವೈದ್ಯರು ತಪಾಸಣೆ ಮಾಡಿದ್ದಾರೆ. ಹಲ್ಲನ್ನು ಕೀಳುವುದಕ್ಕೆ ಲೋಕಲ್ ಅನಸ್ಥೇಸಿಯಾವನ್ನು ಕೂಡ ನೀಡಿದ್ದಾರೆ. ಇದಾದ ನಂತರ ಬಿಜಂತಿ ದೇವಿ ಮೇಲೆ ಎದ್ದಿಲ್ಲ. ಈ ಹಿನ್ನೆಲೆಯಲ್ಲಿ ಜಾರ್ಖಂಡ್‌ನ ಪಲಮು ಜಿಲ್ಲೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಬಿಜಂತಿ ದೇವಿ ಅವರಿಗೆ ಚಿಕಿತ್ಸೆ ನೀಡಿದ ದಂತ ವೈದ್ಯ ಘಟನೆ ಬಳಿಕ ಪರಾರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಪತಿ 36 ವರ್ಷದ ಮುಕೇಶ್ ಚಂದ್ರ ಭಾರತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಾವು ಬಿಹಾರದ ಔರಂಗಾಬಾದ್ ಜಿಲ್ಲೆಯ ನಿವಾಸಿಯಾಗಿದ್ದು, ಚಿಕಿತ್ಸೆ ಸಮಯದಲ್ಲಿ ವೈದ್ಯರು ತಪ್ಪಾಗಿ ನೀಡಿದ ಚುಚ್ಚುಮದ್ದಿನ ಬಳಿಕ ತಮ್ಮ ಪತ್ನಿ ಸಾವನ್ನಪ್ಪಿದ್ದಾಗಿ ಹೇಳಿದ್ದಾರೆ. ಹಲ್ಲು ನೋವು ಕಾಣಿಸಿಕೊಂಡ ಹಿನ್ನೆಲೆ ಮುಕೇಶ್ ಚಂದ್ರ ಭಾರತಿ ಅವರು ತಮ್ಮ ಪತ್ನಿ ಬಿಜಂತಿ ದೇವಿ ಅವರನ್ನು ಮುಂಜಾನೆ 10.30ರ ಸುಮಾರಿಗೆ ಈ ಜನತಾ ಡೆಂಟಲ್ ಕ್ಲಿನಿಕ್‌ಗೆ ಕರೆದುಕೊಂಡು ಬಂದಿದ್ದರು. ಅವರ ಬಾಯಲ್ಲಿ ಅರ್ಧ ಮುರಿದ ಹಲ್ಲೊಂದಿತ್ತು. ಇದು ಅವರಿಗೆ ಭಾರಿ ಕಿರಿಕಿರಿ ಉಂಟು ಮಾಡುತ್ತಿತ್ತು. ಅಲ್ಲಿ ನಮ್ಮ ಗ್ರಾಮದ ಅನೇಕರು ಈ ಹಿಂದೆ ಚಿಕಿತ್ಸೆ ಪಡೆದಿದ್ದರು. ಹಾಗೆಯೇ ನಾವು ಕೂಡ ಆ ವೈದ್ಯರನ್ನು ಸಂಪರ್ಕಿಸಿ ಅಲ್ಲಿಗೆ ಚಿಕಿತ್ಸೆಗಾಗಿ ಹೋದೆವು ಆ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ವಿವರಿಸಿದ್ದಾರೆ.
ಇತರೆ ಸುದ್ದಿಗಳು