ಜಾತ್ರೆಯಲ್ಲಿ ಕೊಂಡ ಹಾಯ್ದ ಸಚಿವ ಮಲ್ಲಿಕಾರ್ಜುನ...!
ದಾವಣಗೆರೆ : ರಾಜ್ಯದಲ್ಲಿ ಉಪ ಚುನಾವಣೆ ಅಖಾಡ ರಂಗೇರಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ v/s ಮುಸ್ಲಿಂ ಅಭ್ಯರ್ಥಿಗಳ ನಡುವಿನ ಫೈಟ್ ಜೋರಾಗ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಅವರಿಗೆ ಬಂಡಾಯ ಬಿಸಿ ತಟ್ಟುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಇದರ ನಡುವೆಯೇ ಸಚಿವ ಎಸ್ಎಸ್ ಮಲ್ಲಿಕಾರ್ಜುನ ಅವರು ಮಗನ ಗೆಲುವಿಗಾಗಿ ದೇವರ ಮೊರೆ ಹೋಗಿದ್ದು, ಜಾತ್ರಾ ಮಹೋತ್ಸವದಲ್ಲಿ ಕೊಂಡ ಹಾಯ್ದಿದ್ದಾರೆ. ಮಲ್ಲಿಕಾರ್ಜುನ ಅವರಿಗೆ ಮಗ ಸಮರ್ಥ್ ಶಾಮನೂರು ಹಾಗೂ ಮಗಳು ಕೂಡ ಸಾಥ್ ನೀಡಿದ್ದಾರೆ. ದಾವಣಗೆರೆ ವೀರಭದ್ರೇಶ್ವರ ಜಾತ್ರಾ ಮಹೊತ್ಸವ ಅದ್ಧೂರಿಯಾಗಿ ನಡೆದಿದೆ. ಜಾತ್ರಾ ಮಹೋತ್ಸವದಲ್ಲಿ ಶಾಮನೂರು ಕುಟುಂಬಸ್ಥರು ಕೂಡ ಭಾಗಿಯಾಗಿದ್ರು. ಮಗನ ಪರ ದಾವಣಗೆರೆಯಲ್ಲಿ ಸಚಿವ S S ಮಲ್ಲಿಕಾರ್ಜುನ ಅವರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇದರ ನಡುವೆಯೂ ವೀರಭದ್ರೇಶ್ವರ ಜಾತ್ರೆಯಲ್ಲಿ ಪಾಲ್ಗೊಂಡ ಸಚಿವರು ಕೊಂಡ ಹಾಯ್ದು ದೇವರ ಸೇವೆ ಮಾಡಿದ್ದಾರೆ. ದಾವಣಗೆರೆಯ ಹಳೆ ಪೇಟೆಯ ಜಾತ್ರೆಯಲ್ಲಿ ಸಚಿವ ಮಲ್ಲಿಕಾರ್ಜುನ ಅವರ ಜೊತೆಯೇ ಪುತ್ರ ಸಮರ್ಥ ಶಾಮನೂರು ಹಾಗೂ ಪುತ್ರಿ ಶ್ರೇಷ್ಠ ಕೂಡ ಕೊಂಡ ಹಾಯ್ದು ಸೇವೆ ಸಲ್ಲಿಸಿದ್ದಾರೆ. ಪ್ರತಿ ವರ್ಷ ನಡೆಯುವ ಜಾತ್ರೆ ವೇಳೆ ಮಲ್ಲಿಕಾರ್ಜುನ ಅವರು ಈ ಸೇವೆ ಮಾಡುತ್ತಾ ಬಂದಿದ್ದಾರೆ. ಈ ಬಾರಿ ಉಪ ಚುನಾವಣೆಯಲ್ಲಿ ಸಮರ್ಥ್ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಹಿನ್ನೆಲೆ ಗೆಲುವಿಗಾಗಿ ಪ್ರಾರ್ಥಿಸಿ ಅಪ್ಪ-ಮಗ ಕೊಂಡ ಹಾಯ್ದಿದ್ದಾರೆ ಎನ್ನಲಾಗ್ತಿದೆ.
ಇತರೆ ಸುದ್ದಿಗಳು