ಭೀಕರ ಅಪಘಾತ; ಯುವ ನಟಿ ಹರ್ಷಿಲ್ ಕಾಲಿಯಾ ಸಾವು...!
ಸಿನಿಮಾ ರಂಗದಲ್ಲಿ ಅತ್ಯಂತ ದುರಂತ ಘಟನೆಯೊಂದು ನಡೆದಿದೆ. ಸೋಮವಾರ ರಾತ್ರಿ ನಡೆದ ಭೀಕರ ಅಪಘಾತದಲ್ಲಿ ಯುವ ನಟಿ ಸಾವನ್ನಪ್ಪಿದ್ದಾರೆ. ಆಕೆ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ನಡುವೆ ಇದ್ದ ಡಿವೈಡರ್ ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಈ ಘಟನೆಯಲ್ಲಿ 30 ವರ್ಷದ ವಯಸ್ಸಿನ ಯಂಗ್ ಹೀರೋಯಿನ್, ಮಾಡೆಲ್ ಸಾವನ್ನಪ್ಪಿದ್ದಾರೆ. ಪ್ರಮುಖ ನಟಿ, ಮಾಡೆಲ್ ಹರ್ಷಿಲ್ ಕಾಲಿಯಾ ಸಾವನ್ನಪ್ಪಿದ್ದಾರೆ. ಸೋಮವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಆಕೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಆಕೆ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ಡಿವೈಡರ್ ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಈ ಘಟನೆ ಜೈಪುರದಲ್ಲಿ ನಡೆದಿದ್ದು, ಹರ್ಷಿಲ್ ಕಾಲಿಯಾ ಅವರಿಗೆ ಜಸ್ಟ್ 30 ವರ್ಷ ವಯಸ್ಸಾಗಿತ್ತು.ರಾತ್ರಿ ಸುಮಾರು 11:30 ಸಮಯದಲ್ಲಿ ಜೈಪುರದ ಶಿಪ್ರಾ ಪಾತ್ ರಸ್ತೆಯಲ್ಲಿ ದುರ್ಘಟನೆಯಲ್ಲಿ ಘಟನೆ ನಡೆದಿದೆ. ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿದ್ದು, ಈ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತದ ರಭಸಕ್ಕೆ ಕಾರು ಡಿವೈಡರ್ ನಿಂದ ಪಕ್ಕದ ರೋಡ್ಗೆ ನುಗ್ಗಿ ಪಲ್ಟಿಯಾಗಿದ್ದು, ಸ್ಥಳೀಯರು ಕೂಡಲೇ ನೆರವಿಗೆ ಬಂದಿದ್ದಾರೆ. ನಟಿಯನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದು, ಆದರೆ ತೀವ್ರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ಆಗಮಿಸುವ ಮುನ್ನವೇ ಸಾವನ್ನಪ್ಪಿದ್ದರು ಎಂದ ವೈದ್ಯರು ಘೋಷಿಸಿದ್ದರು.
ಇತರೆ ಸುದ್ದಿಗಳು