ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಕರ್ನಾಟಕದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಮೋದಿ–ಎಚ್.ಡಿ.ಕೆ. ಮಾಸ್ಟರ್ ಪ್ಲಾನ್: ರಾಜಶೇಖರ್ ಜವಳೆ
ವರದಿಗಾರರು : ಬಸವರಾಜ ಪೂಜಾರಿ | ಸ್ಥಳ : ಬೀದರ | ದಿನಾಂಕ : 02-12-2025

ಕರ್ನಾಟಕದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಮೋದಿ–ಎಚ್.ಡಿ.ಕೆ. ಮಾಸ್ಟರ್ ಪ್ಲಾನ್: ರಾಜಶೇಖರ್ ಜವಳೆ

ಕೇಂದ್ರ ಸರ್ಕಾರವು ಕರ್ನಾಟಕದ ಒಂಬತ್ತು ಜಿಲ್ಲೆಗಳಲ್ಲಿ ಬೃಹತ್ ಕೈಗಾರಿಕಾ ಕಾರಿಡಾರ್ ಸ್ಥಾಪನೆಗೆ ಮಹತ್ವಾಕಾಂಕ್ಷಿ ಮಾಸ್ಟರ್ ಪ್ಲಾನ್‌ನ್ನು ಅಂತಿಮಗೊಳಿಸಿದೆ. ಈ ಪೈಕಿ ಬೀದರ ಜಿಲ್ಲೆಗೂ ಪ್ರಮುಖ ಸ್ಥಾನ ದೊರೆತಿದ್ದು, ಮುಂದಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಮೂಡಿದೆ.

ಜೆ.ಡಿ.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಜವಳೆ ಈ ಕುರಿತು ನೀಡಿದ ಹೇಳಿಕೆಯಲ್ಲಿ, ‘‘ಕೈಗಾರಿಕಾ ಕಾರಿಡಾರ್‌ನಿಂದ ಬೀದರ ಜಿಲ್ಲೆ ಹೈಟೆಕ್ ಸಿಟಿಯಾಗಿ ರೂಪುಗೊಳ್ಳುವುದರ ಜೊತೆಗೆ ಮೂಲಭೂತ ಸೌಕರ್ಯಗಳ ಅಭಿವೃದ್ದಿ, ಹೂಡಿಕೆ ಆಕರ್ಷಣೆ ಮತ್ತು ಜನರ ಜೀವನಮಟ್ಟದ ಸುಧಾರಣೆಗೆ ದಾರಿ ತೆರೆಯಲಿದೆ’’ ಎಂದು ಹೇಳಿದ್ದಾರೆ.

ಜವಳೆಯವರ ಪ್ರಕಾರ, ಕೇಂದ್ರ ಸರ್ಕಾರ ಕೈಗೊಂಡಿರುವ ಈ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ, ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ, ಹಾಗೂ ಕೇಂದ್ರ ವಾಣಿಜ್ಯ–ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಪ್ರಮುಖವಾಗಿ ಮುನ್ನಡೆ ನೀಡಿದ್ದಾರೆ. ರಾಜ್ಯದ ಪರವಾಗಿ ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಬೀದರದಲ್ಲಿ ಕೈಗಾರಿಕೆಗಳ ಸ್ಥಾಪನೆಗಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದೆವು. ಈಗ ಅದಕ್ಕೆ ಸಕಾರಾತ್ಮಕ ಸ್ಪಂದನೆ ದೊರೆತಿರುವುದು ಜಿಲ್ಲೆಯ ಅಭಿವೃದ್ಧಿಗೆ ಹೊಸ ನಿರೀಕ್ಷೆ ಮುಟ್ಟಿಸಿದೆ’’ ಎಂದು ರಾಜಶೇಖರ್ ಜವಳೆ ಹೇಳಿದ್ದಾರೆ. ಕೈಗಾರಿಕಾ ಕಾರಿಡಾರ್ ಜಾರಿಗೊಂಡರೆ ಕೈಗಾರಿಕೆ, ವ್ಯಾಪಾರ, ಮೂಲಸೌಕರ್ಯ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಕರ್ನಾಟಕ ಹೊಸ ದಿಕ್ಕು ಪಡೆಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಇತರೆ ಸುದ್ದಿಗಳು

ನಾಪತ್ತೆಯಾಗಿದ್ದ ಶ್ರೀನಂದಾ ಶವ ಪತ್ತೆ!2000 ಅಡಿ ಆಳದ ಕಣಿವೆಯಲ್ಲಿ ಸಿಕ್ಕ ಮೃತದೇಹ

Views : 1092+

‘ಗ್ಯಾರಂಟಿ’ ಲೆಕ್ಕ ಕೊಡಿ ಎಂದ ಚುನಾವಣೆ ಆಯೋಗ ವಿರುದ್ದ ಗುಡುಗಿದ ಸಿ ಎಂ

Views : 4140+

ಹಿಜ್ಬೊಲ್ಲಾ ಮುಖ್ಯಸ್ಥ ನಯೀಮ್ ಖಾಸಿಮ್ ಹತ್ಯೆಗೈದ ಇಸ್ರೇಲ್ ?

Views : 4181+

ಯುದ್ಧದ ಸಂಘರ್ಷದಲ್ಲಿ ಶುಭಸುದ್ದಿ ! ದೇಶದಲ್ಲಿ ಇನ್ಮುಂದೆ LPG ಕೊರತೆ ಇರಲ್ಲ?

Views : 4238+

ಮಾಜಿ ಸದಸ್ಯ ಯೋಗೀಶ್ ಕೊಲೆ ಪ್ರಕರಣ ಏಪ್ರಿಲ್ 15ಕ್ಕೆ ಮುಂದೂಡಿಕೆ...

Views : 4340+

ಮಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ! ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ

Views : 4388+

ಆಹಾರ ಸಂಗ್ರಹ ಗೋದಾಮಿನಲ್ಲಿ ಬೆಂಕಿ ಅವಘಡ ! ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ

Views : 4420+

ಅನಂತ್ ಅಂಬಾನಿ ಹುಟ್ಟುಹಬ್ಬದ ಪ್ರಯುಕ್ತ ದೇಗುಲದಲ್ಲಿ ವಿಶೇಷ ಪೂಜೆ

Views : 4464+

ಕದನ ವಿರಾಮದ ಖುಷಿಪಟ್ಟವರಿಗೆ ಶಾಕ್ ಕೊಟ್ಟ ಇರಾನ್‌ ಹಾರ್ಮುಜ್‌ !

Views : 4512+

ಬಾಯ್ಸ್ ಹಾಸ್ಟೆಲ್‌ ಬಳಿ ಡ್ರಗ್ಸ್‌ ಮಾರುತ್ತಿದ್ದ ಆರೋಪಿಗಳನ್ನು ಬಂದಿಸಿದ ಯಲಹಂಕ ಪೊಲೀಸರು ...

Views : 4525+

ಪ್ರೇಯಸಿಯ ಆತ್ಮಹತ್ಯೆ ಬಳಿಕ ಪ್ರಿಯಕರನೂ ನೇಣಿಗೆ ಶರಣು ! ಕರಣ ತಿಳಿದು ಬಂದಿಲ್ಲ

Views : 4599+

ವಿರಾಟ್ ಕೊಹ್ಲಿ ಧುರಂಧರ್ 2 ಚಿತ್ರ ನೋಡಿದ ಬಳಿಕ ಸಿನಿಮಾ ಕಲೆಕ್ಷನ್ ಹೆಚ್ಚಿದೆಯೇ ?

Views : 4659+

ಚಂದ್ರದ್ರೋಣ ಪರ್ವತ ಸರಣಿಯಲ್ಲಿ ಕೇರಳದ ಅಪ್ರಾಪ್ತೆ ನಾಪತ್ತೆ!

Views : 6879+

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶೇಕ್ ಇಟ್ ಪುಷ್ಪವತಿ ಖ್ಯಾತಿಯ ನಿಮಿಕಾ ರತ್ನಾಕರ್

Views : 6942+

ಏಪ್ರಿಲ್ 9ಕ್ಕೆ ಘೋಷಣೆಯಾಗಲಿದೆ ದ್ವಿತೀಯ ಪಿಯುಸಿ ಫಲಿತಾಂಶ...

Views : 6993+

ದುಬಾರಿ ಮತ್ತು ಐಷಾರಾಮಿ ಬಂಗಲೆಯನ್ನು ತವರು ಮನೆ ಉಡುಗೊರೆಯಾಗಿ ಪಡೆದ ರಶ್ಮಿಕಾ

Views : 7049+

ಮೈಸೂರು ರಸ್ತೆ ಸಾಟಲೈಟ್ ಬಸ್ ನಿಲ್ದಾಣದ ಸಿಗ್ನಲ್‌ನಲ್ಲಿ ಅಪಘಾತ ! ಚಾಲಕ ಸಾವು

Views : 7210+

ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ! ಜಾಲ ಭೇದಿಸಿದ DRI; ₹5 ಕೋಟಿ ಮೌಲ್ಯದ 3.3 ಕೆಜಿ ಚಿನ್ನ ವಶ

Views : 7238+

ಜನ ವಿಶ್ವಾಸ ವಿಧೇಯಕ 2026 ಅಂಗೀಕಾರ : ಸಣ್ಣ ತಪ್ಪುಗಳಿಗೆ ದಂಡವಷ್ಟೇ ಶಿಕ್ಷೆಯಿಲ್ಲಾ ...

Views : 7368+

ತೆರಿಗೆ ಕಟ್ಟದ ಹೊರರಾಜ್ಯದ ವಾಹನಗಳಿಗೆ ಬೆಂಗಳೂರು ನಗರವೊಂದರಲ್ಲೇ 54.6 ಕೋಟಿ ರೂ ಸಂಗ್ರಹ!

Views : 7549+

ಸಿನಿಮಾ ಅಪ್ಡೇಟ್ : ಬಿಲ್ಲ ರಂಗ ಬಾಷಾ ಸಿನಿಮಾ ಅಪ್ಡೇಟ್ ಏನಿದೆ ?

Views : 9752+

ಜಯಮೃತ್ಯುಂಜಯ ಸ್ವಾಮೀಜಿ ಮೇಲೆ ಲೈಂಗಿಕ ಕಿರುಕುಳ ಆರೋಪ !

Views : 9917+

ಬಾಂಗ್ಲಾದ ಮೊದಲ ಮಾಜಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಅರೆಸ್ಟ್‌

Views : 9978+

ಯೂರಿಯಾ ಖರೀದಿಸಲು ರೈತರಿಗೆ ಗುರುತಿನ ಚೀಟಿ ಕಡ್ಡಾಯ ! ಕೃಷಿ ಜಂಟಿ ನಿರ್ದೇಶಕ ಕಿರಣ್ ಕುಮಾರ್

Views : 10149+