ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಅಕಾಲಿಕ ಮಳೆಗೆ ನಲುಗಿದ  ರೈತ...! ಹೂ ಬೆಳೆಗಾರರಿಗೆ ಭಾರೀ ನಷ್ಟ...
ವರದಿಗಾರರು : Shobha jagadish | ಸ್ಥಳ : ಬೆಂಗಳೂರು | ದಿನಾಂಕ : 23-03-2026

ಅಕಾಲಿಕ ಮಳೆಗೆ ನಲುಗಿದ ರೈತ...! ಹೂ ಬೆಳೆಗಾರರಿಗೆ ಭಾರೀ ನಷ್ಟ...

ಗದಗ: ಈ ಬಾರಿ ಯುಗಾದಿ ಹಬ್ಬದ ಮುನ್ನ ಉತ್ತಮ ಆದಾಯದ ನಿರೀಕ್ಷೆಯಲ್ಲಿ ಹೂ ಬೆಳೆ ಬೆಳೆದಿದ್ದ ಗದಗದ ರೈತರಿಗೆ ಅಕಾಲಿಕ ಮಳೆ ಭಾರೀ ಹೊಡೆತ ನೀಡಿದೆ. ಕಳೆದ ಕೆಲ ದಿನಗಳಿಂದ ಸುರಿದ ಭಾರೀ ಮಳೆ ,ಹೂ ಬೆಳೆಗಳಿಗೆ ದೊಡ್ಡ ಮಟ್ಟದ ಹಾನಿ ಉಂಟುಮಾಡಿದ್ದು, ಸಾವಿರಾರು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗದಗ ಜಿಲ್ಲೆಯ ಲಕ್ಕುಂಡಿ, ಕನವಿ, ಹೊಸೂರು, ಡಂಬಲ್, ಕಡಕೋಳ ಸೇರಿದಂತೆ ಹಲವಾರು ಗ್ರಾಮಗಳು ಹೂ ಬೆಳೆಗಾಗಿ ಪ್ರಸಿದ್ಧವಾಗಿವೆ. ಇಲ್ಲಿ ಬೆಳೆಯುವ ಚೆಂಡು ಮಲ್ಲಿಗೆ,ಸೇವಂತಿಗೆ ಮತ್ತು ಮಲ್ಲಿಗೆ ಹೂಗಳು ಪ್ರತಿದಿನವೂ ಧಾರವಾಡ, ಬೆಳಗಾವಿ ಹಾಗೂ ರಾಜ್ಯದ ಇತರೆ ಮಾರುಕಟ್ಟೆಗಳಿಗೆ ಸಾಗಾಟವಾಗುತ್ತವೆ. ವಿಶೇಷವಾಗಿ ಯುಗಾದಿ ಹಬ್ಬದ ಸಮಯದಲ್ಲಿ ಈ ಹೂಗಳಿಗೆ ಭಾರೀ ಬೇಡಿಕೆ ಇರುತ್ತದೆ. ಆದರೆ, ಅಕಾಲಿಕ ಮಳೆಯ ಪರಿಣಾಮವಾಗಿ ಹೂಗಳ ಗುಣಮಟ್ಟ ಕುಸಿದು, ಮಾರುಕಟ್ಟೆಗೆ ಕಳುಹಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ಮಳೆಯ ಜೊತೆಗೆ ಬಂದ ಬಿರುಗಾಳಿಯಿಂದ ಹೂ ಗಿಡಗಳು ನೆಲಕ್ಕುರುಳಿವೆ. ನೀರು ನಿಂತಿರುವುದರಿಂದ ಗಿಡಗಳ ಬೇರುಗಳು ಕೊಳೆತು ಹೋಗಿದ್ದು, ಬೆಳೆ ಸಂಪೂರ್ಣ ಹಾನಿಯಾಗಿದೆ. ಇನ್ನೂ ಹೂ ಬಿಡದ ಮೊಗ್ಗುಗಳೇ ಕುಸಿದು ಹೋಗಿರುವುದರಿಂದ ಮುಂದಿನ ದಿನಗಳಲ್ಲೂ ಉತ್ಪಾದನೆ ಕಡಿಮೆಯಾಗುವ ಭೀತಿ ಇದೆ. ಈಗಾಗಲೇ ಕಟಾವು ಮಾಡಿದ್ದ ಹೂಗಳು ಕೂಡ ಮಳೆ ನೀರಿಗೆ ತೋಯ್ದು ಹಾಳಾಗಿವೆ.

ಇತರೆ ಸುದ್ದಿಗಳು

ನಾಪತ್ತೆಯಾಗಿದ್ದ ಶ್ರೀನಂದಾ ಶವ ಪತ್ತೆ!2000 ಅಡಿ ಆಳದ ಕಣಿವೆಯಲ್ಲಿ ಸಿಕ್ಕ ಮೃತದೇಹ

Views : 1072+

‘ಗ್ಯಾರಂಟಿ’ ಲೆಕ್ಕ ಕೊಡಿ ಎಂದ ಚುನಾವಣೆ ಆಯೋಗ ವಿರುದ್ದ ಗುಡುಗಿದ ಸಿ ಎಂ

Views : 4120+

ಹಿಜ್ಬೊಲ್ಲಾ ಮುಖ್ಯಸ್ಥ ನಯೀಮ್ ಖಾಸಿಮ್ ಹತ್ಯೆಗೈದ ಇಸ್ರೇಲ್ ?

Views : 4161+

ಯುದ್ಧದ ಸಂಘರ್ಷದಲ್ಲಿ ಶುಭಸುದ್ದಿ ! ದೇಶದಲ್ಲಿ ಇನ್ಮುಂದೆ LPG ಕೊರತೆ ಇರಲ್ಲ?

Views : 4218+

ಮಾಜಿ ಸದಸ್ಯ ಯೋಗೀಶ್ ಕೊಲೆ ಪ್ರಕರಣ ಏಪ್ರಿಲ್ 15ಕ್ಕೆ ಮುಂದೂಡಿಕೆ...

Views : 4320+

ಮಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ! ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ

Views : 4368+

ಆಹಾರ ಸಂಗ್ರಹ ಗೋದಾಮಿನಲ್ಲಿ ಬೆಂಕಿ ಅವಘಡ ! ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ

Views : 4400+

ಅನಂತ್ ಅಂಬಾನಿ ಹುಟ್ಟುಹಬ್ಬದ ಪ್ರಯುಕ್ತ ದೇಗುಲದಲ್ಲಿ ವಿಶೇಷ ಪೂಜೆ

Views : 4444+

ಕದನ ವಿರಾಮದ ಖುಷಿಪಟ್ಟವರಿಗೆ ಶಾಕ್ ಕೊಟ್ಟ ಇರಾನ್‌ ಹಾರ್ಮುಜ್‌ !

Views : 4492+

ಬಾಯ್ಸ್ ಹಾಸ್ಟೆಲ್‌ ಬಳಿ ಡ್ರಗ್ಸ್‌ ಮಾರುತ್ತಿದ್ದ ಆರೋಪಿಗಳನ್ನು ಬಂದಿಸಿದ ಯಲಹಂಕ ಪೊಲೀಸರು ...

Views : 4505+

ಪ್ರೇಯಸಿಯ ಆತ್ಮಹತ್ಯೆ ಬಳಿಕ ಪ್ರಿಯಕರನೂ ನೇಣಿಗೆ ಶರಣು ! ಕರಣ ತಿಳಿದು ಬಂದಿಲ್ಲ

Views : 4579+

ವಿರಾಟ್ ಕೊಹ್ಲಿ ಧುರಂಧರ್ 2 ಚಿತ್ರ ನೋಡಿದ ಬಳಿಕ ಸಿನಿಮಾ ಕಲೆಕ್ಷನ್ ಹೆಚ್ಚಿದೆಯೇ ?

Views : 4639+

ಚಂದ್ರದ್ರೋಣ ಪರ್ವತ ಸರಣಿಯಲ್ಲಿ ಕೇರಳದ ಅಪ್ರಾಪ್ತೆ ನಾಪತ್ತೆ!

Views : 6859+

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶೇಕ್ ಇಟ್ ಪುಷ್ಪವತಿ ಖ್ಯಾತಿಯ ನಿಮಿಕಾ ರತ್ನಾಕರ್

Views : 6922+

ಏಪ್ರಿಲ್ 9ಕ್ಕೆ ಘೋಷಣೆಯಾಗಲಿದೆ ದ್ವಿತೀಯ ಪಿಯುಸಿ ಫಲಿತಾಂಶ...

Views : 6973+

ದುಬಾರಿ ಮತ್ತು ಐಷಾರಾಮಿ ಬಂಗಲೆಯನ್ನು ತವರು ಮನೆ ಉಡುಗೊರೆಯಾಗಿ ಪಡೆದ ರಶ್ಮಿಕಾ

Views : 7029+

ಮೈಸೂರು ರಸ್ತೆ ಸಾಟಲೈಟ್ ಬಸ್ ನಿಲ್ದಾಣದ ಸಿಗ್ನಲ್‌ನಲ್ಲಿ ಅಪಘಾತ ! ಚಾಲಕ ಸಾವು

Views : 7190+

ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ! ಜಾಲ ಭೇದಿಸಿದ DRI; ₹5 ಕೋಟಿ ಮೌಲ್ಯದ 3.3 ಕೆಜಿ ಚಿನ್ನ ವಶ

Views : 7218+

ಜನ ವಿಶ್ವಾಸ ವಿಧೇಯಕ 2026 ಅಂಗೀಕಾರ : ಸಣ್ಣ ತಪ್ಪುಗಳಿಗೆ ದಂಡವಷ್ಟೇ ಶಿಕ್ಷೆಯಿಲ್ಲಾ ...

Views : 7348+

ತೆರಿಗೆ ಕಟ್ಟದ ಹೊರರಾಜ್ಯದ ವಾಹನಗಳಿಗೆ ಬೆಂಗಳೂರು ನಗರವೊಂದರಲ್ಲೇ 54.6 ಕೋಟಿ ರೂ ಸಂಗ್ರಹ!

Views : 7529+

ಸಿನಿಮಾ ಅಪ್ಡೇಟ್ : ಬಿಲ್ಲ ರಂಗ ಬಾಷಾ ಸಿನಿಮಾ ಅಪ್ಡೇಟ್ ಏನಿದೆ ?

Views : 9731+

ಜಯಮೃತ್ಯುಂಜಯ ಸ್ವಾಮೀಜಿ ಮೇಲೆ ಲೈಂಗಿಕ ಕಿರುಕುಳ ಆರೋಪ !

Views : 9896+

ಬಾಂಗ್ಲಾದ ಮೊದಲ ಮಾಜಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಅರೆಸ್ಟ್‌

Views : 9957+

ಯೂರಿಯಾ ಖರೀದಿಸಲು ರೈತರಿಗೆ ಗುರುತಿನ ಚೀಟಿ ಕಡ್ಡಾಯ ! ಕೃಷಿ ಜಂಟಿ ನಿರ್ದೇಶಕ ಕಿರಣ್ ಕುಮಾರ್

Views : 10129+