ಆಟೋ ಚಾಲಕರಿಗೆ ಎಲ್ ಪಿ ಜಿ ಸಮಸ್ಯೆ ...! ಕಣ್ಣು ಮುಚ್ಚಿ ಕುಳಿತ ಸರ್ಕಾರ...
ಬೆಂಗಳೂರು : ಮೊನ್ನೆ ಮಂಗಳೂರಿನಲ್ಲಿ ಆಟೋ ಗ್ಯಾಸ್ ಸಮಸ್ಯೆ ಹೆಚ್ಚಾಗಿತ್ತು .ಈಗ ಬೆಂಗಳೂರಿನಲ್ಲೂ ಅದೇ ಸಮಸ್ಯೆ ಉದ್ಭವಿಸದೆ . ಗ್ಯಾಸ್ ಏಜೆನ್ಸಿಗಳ ಮುಂದೆ ಆಟೋ ಸಾಲು ಕಟ್ಟಿ ನಿಂತಿದೆ .ನಮ್ಮ ಗೋಳು ಯಾರು ಕೇಳೋರು ಅಂತ ಆಟೋ ಚಾಲಕರು ಹಿಡಿ ಶಾಪ ಹಾಕುತ್ತಿದ್ದಾರೆ. ಇಸ್ರೆಲ್ ಅಮೆರಿಕಾ-ಇರಾನ್ ಯುದ್ಧದಿಂದಾಗಿ ಭಾರತದಲ್ಲಿ ಗ್ಯಾಸ್ ಅಭಾವ ಸೃಷ್ಟಿಯಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಲ್‌ಪಿಜಿ ಸಮಸ್ಯೆ ಉದ್ಭವಿಸಿದೆ. ಆಟೋ ದುಡಿಮೆಯನ್ನು ನಂಬಿ ಜೀವನ ಮಾಡುತ್ತಿರುವಾಗ ಗ್ಯಾಸ್ ಸಿಗುತ್ತಿಲ್ಲ. ಹೀಗಾಗಿ ಆಟೋವನ್ನು ನಿಲ್ಲಿಸುವ ಸ್ಥಿತಿ ಬಂದಿದ್ದು, ಸಂಸಾರದ ಬಂಡಿ ಸಾಗಿಸಲು ಸಾರಥಿಗಳು ಒದ್ದಾಡುತ್ತಿದ್ದಾರೆ. ಯಾಕಂದ್ರೆ, ಹಗಲು-ರಾತ್ರಿ ಗ್ಯಾಸ್‌ಗಳ ಮುಂದೆ ಕ್ಯೂ ನಿಲ್ಲೋದೇ ಆಯ್ತು. ಗ್ಯಾಸ್ ತುಂಬಿ ಆಟೋ ಓಡಿಸೋದೆ ಆಮೇಲಿನ ಮಾತು. ಯಾವ ಬಂಕ್ ಮುಂದೆ ನೋಡಿದ್ರೂ ಕಿಲೋಮೀಟರ್‌ಗಟ್ಟಲೇ ಹನುಮನ ಬಾಲದಂತೆ ಆಟೋಗಳ ಸಾಲು ಸಾಮಾನ್ಯವಾಗಿ ಬಿಟ್ಟಿದೆ. ಯಾವ ಬಂಕ್ ನೋಡಿದ್ರೂ ಕನಿಷ್ಠ 100 ರಿಂದ 200 ಆಟೋಗಳು ಇದ್ದೇ ಇರ್ತವೆ. ಮನೆ ಮಕ್ಕಳು ಬೀದಿಯಲ್ಲಿ ನಿಲ್ಲೋ ಸ್ಥಿತಿ ಬಂದೊದಗಿದೆ.
ಇತರೆ ಸುದ್ದಿಗಳು