ಲವ್ ಮಾಕ್ಟೇಲ್-3 ಚಿತ್ರದ ಕೃತಿ ಚೌರ್ಯ ಕೇಸ್ ಸುಖಾಂತ್ಯಗೊಳಿಸಿದ ಡಾ!! ಜಯಮಾಲಾ
ಲವ್ ಮಾಕ್ಟೇಲ್-2 ಚಿತ್ರದ ಕೃತಿ ಚೌರ್ಯದ ಕೇಸ್ ಅಂತ್ಯಗೊಂಡಿದೆ. ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾಕ್ಟರ್ ಜಯಮಾಲಾ ಅವರು ಡಾರ್ಲಿಂಗ್ ಕೃಷ್ಣ ಹಾಗೂ ಗುರು ದೇಶಪಾಂಡೆ ಅವರನ್ನ ಪ್ರತ್ಯೇಕವಾಗಿಯೇ ಮಾತನಾಡಿಸಿದ್ದಾರೆ. ಇಬ್ಬರ ಅಭಿಪ್ರಾಯ ಪಡೆದು ಈ ಸಮಸ್ಯೆ ಗೆ ತಿಲಾಂಜಲಿ ಹಾಡಿದ್ದಾರೆ. ಲವ್ ಮಾಕ್ಟೇಲ್-3 ನಾಯಕ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಆ ದಿನ ಶಾಕ್ ಆಗಿದ್ದರು. ಕೃತಿ ಚೌರ್ಯ ಅನ್ನೋ ಪದವೇ ಇವರಿಗೆ ಹೊಸ ಪದವೆ ಆಗಿತ್ತು. ಕಥೆ ಕದ್ದಿದ್ದೇನೆ ಅನ್ನೋದೇ ಒಂದು ದೊಡ್ಡ ಜೋಕ್ ಅಂತ ಕೂಡ ಕೃಷ್ಣ ಹೇಳಿದ್ದರು. ಆದರೆ, ರಾಘವೇಂದ್ರ ನಾಯಕ್ ಮತ್ತು ಗುರು ದೇಶಪಾಂಡೆ ಸುಮ್ಮನೆ ಇರಲಿಲ್ಲ. ಇವರು ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದರು. ಆದರೂ ಮಾತುಗಳು ಇದ್ದೇ ಇದ್ದವು. ಇದರ ನಡುವೆ ಈ ಒಂದು ಕೃತಿ ಚೌರ್ಯದ ಕೇಸ್ ಎಂಡ್ ಆಗಿದೆ. ಲವ್ ಮಾಕ್ಟೇಲ್-3 ಚಿತ್ರದ ಕೃತಿ ಚೌರ್ಯ ಕೇಸ್ ಎಂಡ್ ಆಗಿದೆ. ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ ಅವರು ಈ ಒಂದು ಪ್ರಕರಣಕ್ಕೆ ಅಂತ್ಯ ಹಾಡಿದ್ದಾರೆ. ಚಿತ್ರದ ನಾಯಕ ಮತ್ತು ನಿರ್ದೇಶಕ ಕೃಷ್ಣ ಹಾಗೂ ನಿರ್ಮಾಪಕಿ ಮಿಲನ ನಾಗರಾಜ್ ಅವರೊಟ್ಟಿಗೆ ಮಾತನಾಡಿದ್ದಾರೆ. ಅಸಲಿ ವಿಷಯ ಏನು ಅನ್ನೋದನ್ನು ತಿಳಿದುಕೊಂಡಿದ್ದಾರೆ. ಇದೇ ರೀತಿನೇ ಗುರು ದೇಶಪಾಂಡೆ ಹಾಗೂ ರಾಘವೇಂದ್ರ ನಾಯಕ್ ಅವರ ಜೊತೆಗೂ ಮಾತನಾಡಿದ್ದಾರೆ. ಕೊನೆಗೆ ಒಂದು ನಿರ್ಧಾರಕ್ಕೆ ಬಂದಿದ್ದಾರೆ.ಇಬ್ಬರನ್ನು ಮಾತನಾಡಿಸಿ ಈ ಸಮಸ್ಯೆ ಗೆ ಅಂತ್ಯ ಹಾಡಿದ್ದಾರೆ .
ಇತರೆ ಸುದ್ದಿಗಳು