ಚಂದ್ರನತ್ತ 4 ಗಗನಯಾನಿಗಳ ಐತಿಹಾಸಿಕ ಪ್ರಯಾಣ ಆರಂಭ...!
ಕೇಪ್ ಕ್ಯಾನವೆರಲ್ : 50 ವರ್ಷಗಳ ಬಳಿಕ ಚಂದ್ರನ ಬಳಿಗೆ ಹೋಗುವ ಹುಮ್ಮಸ್ಸಿನಲ್ಲಿ ನಾಲ್ವರು ಗಗನಯಾನಿಗಳನ್ನು ಹೊತ್ತ ಓರಿಯನ್ ಕ್ಯಾಪ್ಸ್ಯೂಲ್ ಜತೆ 33 ಅಡಿಯ ಎಸ್‌ಎಲ್‌ಎಸ್ ರಾಕೆಟ್ ಗುರುವಾರ ಮುಂಜಾನೆ 4.05ಕ್ಕೆ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ . 50 ವರ್ಷಗಳ ಬಳಿಕ ಚಂದ್ರನ ಬಳಿಗೆ ಹೋಗುವ ಹುಮ್ಮಸ್ಸಿನಲ್ಲಿ ನಾಲ್ವರು ಗಗನಯಾನಿಗಳನ್ನು ಹೊತ್ತ ಓರಿಯನ್ ಕ್ಯಾಪ್ಸ್ಯೂಲ್ ಜತೆ 33 ಅಡಿಯ ಎಸ್‌ಎಲ್‌ಎಸ್ ರಾಕೆಟ್ ಗುರುವಾರ ಮುಂಜಾನೆ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. 2023ರಲ್ಲೇ ಇದರ ಉಡಾವಣೆಯ ಯೋಜನೆಯಿತ್ತಾದರೂ, ಕಾರಣಾಂತರಗಳಿಂದ ವಿಳಂಬವಾಗಿ, ಈಗ 10 ದಿನಗಳ ಈ ಪ್ರಯಾಣ ಸಾಕಾರವಾಗಿದೆ. 5 ನಿಮಿಷಗಳ ಬಳಿಕ ಅದರ ಸಾರಥ್ಯ ವಹಿಸಿರುವ ಕಮಾಂಡರ್ ರೀಡ್ ವೈಸ್‌ಮನ್, ‘ನಾವು ಸುಂದರ ಚಂದ್ರೋದಯವನ್ನು ಕಾಣುತ್ತಿದ್ದೇವೆ. ಅದರತ್ತಲೇ ಹೊರಟಿದ್ದೇವೆ’ ಎಂದು ಸಂತಸದ ಸಂದೇಶವನ್ನು ರವಾನಿಸಿದರು. ಅವರೊಂದಿಗೆ ಪೈಲಟ್ ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್ ಕೆನಡಾದ ಜೆರೆಮಿ ಹ್ಯಾನ್ಸೆನ್ ಇದ್ದರು. 26 ಲಕ್ಷ ಲೀ. ಹೈಡ್ರೋಜನ್ ಇಂಧನವನ್ನು ರಾಕೆಟ್‌ಗೆ ತುಂಬಲಾಗಿದೆ.
ಇತರೆ ಸುದ್ದಿಗಳು