ರೌಡಿಶೀಟರ್ ಜಹೀರ್ ನೇತೃತ್ವದಲ್ಲಿ ನಡೆದ ಡ್ರಗ್ಸ್ ಪಾರ್ಟಿ ! ಪೋಲೀಸರ ದಾಳಿ
ಚಾಮರಾಜನಗರದ ಕೊಳ್ಳೇಗಾಲದಲ್ಲಿ ರೌಡಿಶೀಟರ್ ಜಹೀರ್ ನೇತೃತ್ವದಲ್ಲಿ ನಡೆದ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಪೊಲೀಸರ ದಾಳಿ ನಡೆದಿದೆ. ಫಯಾಜ್ ಖಾನ್ ರೆಸಾರ್ಟ್‌ನಲ್ಲಿ 50ಕ್ಕೂ ಹೆಚ್ಚು ಮಂದಿ ಸೇರಿ ಗಾಂಜಾ, ಚರಸ್ ಸೇವಿಸಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ 15 ಮಂದಿ ಡ್ರಗ್ಸ್ ಸೇವನೆ ದೃಢಪಟ್ಟಿದ್ದು, ತನಿಖೆ ಮುಂದುವರಿದಿದೆ. ಪ್ರಭಾವಿ ವ್ಯಕ್ತಿಗಳ ಹೆಸರು ಕೇಳಿಬಂದಿರುವುದು ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದೆ.ಚಾಮರಾಜನಗರ,ಜಿಲ್ಲೆಯ ಕೊಳ್ಳೇಗಾಲ ಹೊರವಲಯದಲ್ಲಿ ನಡೆದ ಡ್ರಗ್ಸ್ ಪಾರ್ಟಿ ಪ್ರಕರಣ ಸಂಚಲನ ಮೂಡಿಸಿದೆ. ಬೆಂಗಳೂರು ಮೂಲದ ರೌಡಿಶೀಟರ್ ಜಹೀರ್ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಪಾರ್ಟಿ ಪೊಲೀಸರ ದಾಳಿ ವೇಳೆ ಬಯಲಾಗಿದೆ. ಜಹೀರ್ ಜನ್ಮದಿನದ ಅಂಗವಾಗಿ ವಿಶೇಷವಾಗಿ ಈ ಪಾರ್ಟಿ ಆಯೋಜಿಸಲಾಗಿತ್ತು ಎಂದು ವರದಿಯಾಗಿದೆ . ಪಾರ್ಟಿಯಲ್ಲಿ ಭಾಗಿಯಾದವರು ಗಾಂಜಾ ಹಾಗೂ ಚರಸ್ ಸೇವಿಸಿ ಮೋಜುಮಸ್ತಿಯಲ್ಲಿ ತೊಡಗಿದ್ದರು. ಬಳಿಕ ಪೊಲೀಸರು ನಡೆಸಿದ ವೈದ್ಯಕೀಯ ತಪಾಸಣೆಯಲ್ಲಿ 15 ಮಂದಿ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ. ಈ ಪಾರ್ಟಿ ಕೊಳ್ಳೇಗಾಲದ ಎ1 ಕಾಂಟ್ರಾಕ್ಟರ್ ಫಯಾಜ್ ಖಾನ್ ಅವರ ರೆಸಾರ್ಟ್‌ನಲ್ಲಿ ನಡೆದಿದ್ದು, ಈ ವಿಚಾರ ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ. ಫಯಾಜ್ ಖಾನ್ ಪ್ರಭಾವಿ ರಾಜಕೀಯ ಸಂಪರ್ಕ ಹೊಂದಿರುವ ವ್ಯಕ್ತಿಯಾಗಿದ್ದು, ಕಾಂಗ್ರೆಸ್ ನಾಯಕರ ಆಪ್ತನೆಂದು ಹೇಳಲಾಗುತ್ತಿದೆ.
ಇತರೆ ಸುದ್ದಿಗಳು