ಏಕಾಏಕಿ ರಸ್ತೆಗೆ ಹಾರಿದ ಕರಡಿ! ಬೈಕ್ ಬಿಟ್ಟು ಪರಾರಿಯಾದ ಜನ!
ಬೆಂಗಳೂರು: ಬೆಂಗಳೂರಿನಲ್ಲಿ ರಸ್ತೆಯಲ್ಲಿ ಆರಾಮಾಗಿ ಬೈಕ್‌ನಲ್ಲಿ ಹೋಗುತ್ತಿದ್ದಾಗ, ದಿಢೀರನೆ ಎದುರಿಗೆ ಬೃಹತ್ ಕರಡಿಯೊಂದು ಬಂದು ನಿಂತರೆ ಹೇಗಾಗಬೇಡ? ಹೌದು, ಇಂತಹದ್ದೇ ಒಂದು ಬೆಚ್ಚಿಬೀಳಿಸುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದ್ದು, ಕರಡಿಯ ಹುಚ್ಚಾಟಕ್ಕೆ ಸವಾರರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ! ಚನ್ನಪಟ್ಟಣದ ಕೋಡಂಬಳ್ಳಿ ಗ್ರಾಮದ ರಸ್ತೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರರ ಮೇಲೆ ಕರಡಿ ಏಕಾಏಕಿ ದಾಳಿಗೆ ಮುಂದಾಗಿದೆ. ಕರಡಿಯ ರೌದ್ರಾವತಾರ ಕಂಡು ಬೆಚ್ಚಿಬಿದ್ದ ಸವಾರರು, ತಮ್ಮ ಪ್ರಾಣ ಉಳಿಸಿಕೊಂಡರೆ ಸಾಕು ಎಂದು ಬೈಕ್‌ಗಳನ್ನು ರಸ್ತೆಯಲ್ಲೇ ಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾರೆ. ರಸ್ತೆಯಲ್ಲಿದ್ದ ಬೈಕ್‌ಗಳನ್ನು ಒದ್ದು ಕರಡಿ ಹುಚ್ಚಾಟ ಮೆರೆದಿದ್ದು, ಸುತ್ತಮುತ್ತಲಿನ ಜನರಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಇತರೆ ಸುದ್ದಿಗಳು