ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಭಾರತದಲ್ಲಿ ಲಿವರ್ ಕಾಯಿಲೆಗಳನ್ನು ತಪ್ಪಿಸಲು ಹೊಸ “ಹೆವ್ಯಾ (Hevaxin)” ಲಸಿಕೆಯ  ಮಾರುಕಟ್ಟೆಗೆ ಬಿಡುಗಡೆ !
ವರದಿಗಾರರು : ಮಮತಾ | ಸ್ಥಳ : Bengaluru | ದಿನಾಂಕ : 10-01-2026

ಭಾರತದಲ್ಲಿ ಲಿವರ್ ಕಾಯಿಲೆಗಳನ್ನು ತಪ್ಪಿಸಲು ಹೊಸ “ಹೆವ್ಯಾ (Hevaxin)” ಲಸಿಕೆಯ ಮಾರುಕಟ್ಟೆಗೆ ಬಿಡುಗಡೆ !

ಕಲುಷಿತ ನೀರು ಮತ್ತು ಅಶುದ್ಧ ಆಹಾರದಿಂದ ಹರಡುವ 'ಹೆಪಟೈಟಿಸ್ ಇ' (Hepatitis E) ವೈರಸ್ ವಿರುದ್ಧ ಭಾರತವು ಈಗ ಪ್ರಬಲ ಅಸ್ತ್ರವನ್ನು ಪಡೆದುಕೊಂಡಿದೆ. ಪ್ರಖ್ಯಾತ ಔಷಧ ತಯಾರಿಕಾ ಸಂಸ್ಥೆ ಡಾ. ರೆಡ್ಡೀಸ್ ಲ್ಯಾಬೊರೇಟರಿ ದೇಶದಲ್ಲೇ ಮೊದಲ ಬಾರಿಗೆ 'ಹೆವ್ಯಾಕ್ಸಿನ್' (Hevaxin) ಎಂಬ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಯಾರಿಗೆ ಈ ಲಸಿಕೆ ಅಗತ್ಯ?

ವಯೋಮಿತಿ: 18 ರಿಂದ 65 ವರ್ಷದೊಳಗಿನ ಯಾರು ಬೇಕಾದರೂ ಈ ಲಸಿಕೆಯನ್ನು ಪಡೆಯಬಹುದು. ಗರ್ಭಿಣಿಯರಿಗೆ ವರ: ಹೆಪಟೈಟಿಸ್ ಇ ವೈರಸ್ ಗರ್ಭಿಣಿಯರಲ್ಲಿ ಲಿವರ್ ವೈಫಲ್ಯ ಮತ್ತು ಗರ್ಭಪಾತಕ್ಕೆ ಪ್ರಮುಖ ಕಾರಣವಾಗಿದೆ. ಈ ಲಸಿಕೆಯು ಗರ್ಭಿಣಿಯರ ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಸುರಕ್ಷತೆ: ಇದು ‘ರಿಕಾಂಬಿನೆಂಟ್’ ಮಾದರಿಯ ಲಸಿಕೆಯಾಗಿದ್ದು, ಕ್ಲಿನಿಕಲ್ ಪ್ರಯೋಗಗಳಲ್ಲಿ ಸಂಪೂರ್ಣ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಾಬೀತಾಗಿದೆ.

ಅಂಗೀಕಾರ: ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ (DCGI) ಈ ಲಸಿಕೆಗೆ ಅನುಮೋದನೆ ನೀಡಿದೆ. ಆರೋಗ್ಯ ರಕ್ಷಣೆ: ದೇಶದಲ್ಲಿ ಸಂಭವಿಸುವ ಒಟ್ಟು ಲಿವರ್ ವೈಫಲ್ಯ ಪ್ರಕರಣಗಳಲ್ಲಿ ಶೇ. 15 ರಿಂದ 45 ರಷ್ಟು ಪ್ರಕರಣಗಳಿಗೆ ಹೆಪಟೈಟಿಸ್ ಇ ವೈರಸ್ ಕಾರಣವಾಗಿದೆ. ಈ ಲಸಿಕೆ ಇದನ್ನು ತಡೆಯಬಲ್ಲದು. ದೋಸ್ ಮತ್ತು ಬೆಲೆ ಎಷ್ಟು? ಲಸಿಕೆಯ ಅಧಿಕೃತ ಬೆಲೆಯನ್ನು ಕಂಪನಿಯು ಇನ್ನೂ ಘೋಷಿಸಿಲ್ಲ. ಆದರೆ, ತಜ್ಞರ ಪ್ರಕಾರ ಲಿವರ್ ವೈಫಲ್ಯದ ಚಿಕಿತ್ಸೆಗೆ ತಗಲುವ ಲಕ್ಷಾಂತರ ರೂಪಾಯಿಗಳ ವೆಚ್ಚಕ್ಕೆ ಹೋಲಿಸಿದರೆ, ಈ ಲಸಿಕೆಯ ಬೆಲೆ ಅತ್ಯಂತ ಕೈಗೆಟುಕುವ ದರದಲ್ಲಿರಲಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದವರಿಗೂ ಸುಲಭವಾಗಿ ಲಸಿಕೆ ಲಭ್ಯವಾಗಲಿದೆ.

ಹೆಪಟೈಟಿಸ್ ಇ ಲಕ್ಷಣಗಳೇನು?

ಚರ್ಮ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು (ಕಾಮಾಲೆ ಅಥವಾ ಜಾಂಡೀಸ್). ಗಾಢ ಹಳದಿ ಅಥವಾ ಕಂದು ಬಣ್ಣದ ಮೂತ್ರ ವಿಸರ್ಜನೆ. ವಾಂತಿ, ಹೊಟ್ಟೆ ನೋವು ಮತ್ತು ಹಸಿವು ಇಲ್ಲದಿರುವುದು. ಅತಿಯಾದ ಸುಸ್ತು, ಕೀಲು ನೋವು ಮತ್ತು ಲಘು ಜ್ವರ. ತಡೆಗಟ್ಟುವ ಕ್ರಮಗಳು: ಲಸಿಕೆಯ ಜೊತೆಗೆ, ಕುದಿಸಿ ಆರಿಸಿದ ನೀರನ್ನು ಕುಡಿಯುವುದು, ಊಟಕ್ಕೆ ಮುಂಚೆ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು ಮತ್ತು ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಈ ಕಾಯಿಲೆಯಿಂದ ಬಚಾವಾಗಲು ಅತ್ಯಗತ್ಯ.

ಇತರೆ ಸುದ್ದಿಗಳು

ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ, ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ

Views : 1648+

ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ ?

Views : 1878+

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು

Views : 4341+

ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ 6 ಬಂಪರ್ ಘೋಷಣೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ!

Views : 4519+

ಮೊನಾಲಿಸಾ ಪ್ರಬುದ್ಧಳಾಗಿದ್ದಾಳೆ – ಪತಿಗೆ ಟ್ರಾನ್ಸಿಟ್ ಬೇಲ್‌ ಮಂಜೂರು ಮಾಡಿದ ಕೇರಳ ಹೈಕೋರ್ಟ್

Views : 4540+

ನೂತನ ಸಿಎಂಗೆ ಇಚ್ಛಾಶಕ್ತಿ ಕೊರತೆ ಇದೆ: ಸಿ.ಟಿ.ರವಿ

Views : 4619+

ದೇಶದ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ ಡಿಕೆಶಿ

Views : 7098+

ಇರಾನ್ ಮೇಲೆ ಅಮೆರಿಕ ವಾಯುದಾಳಿ! ರಕ್ಷಣಾತ್ಮಕ ದಾಳಿಗೆ ನಿಯಂತ್ರಣ ಕೇಂದ್ರ ಉಡೀಸ್ ...

Views : 7579+

ದಾವಣಗೆರೆಯ ಕೆ ಟಿ ಜಿ ನಗರ ಅವ್ಯವಸೆಯ ಆಗರ ! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

Views : 7617+

ಡಿ.ಕೆ.ಶಿವಕುಮಾರ್ ಅವರಿಂದ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್

Views : 12812+

ಸಂಪುಟ ರಚನೆಗೆ ಕ್ಷಣಗಣನೆ. ಡಿಕೆಶಿ, ಸಿದ್ದು ದೆಹಲಿಗೆ...

Views : 12936+

ಸತತ 2ನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ RCB...

Views : 13211+

ಹಿಮಾಚಲದಲ್ಲಿ ಭಯಾನಕ ಅಪಘಾತ! ಪ್ರಪಾತಕ್ಕೆ ಬಿದ್ದ ಕಾರ್ ....

Views : 13232+

ರಾಜ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್​​...! ಮುಂದಿನ ಸಿ ಎಂ ಯಾರು ?

Views : 27200+

ಚಾಮುಂಡಿ ತಾಯಿ ಮುಂದೆ ಕ್ಷಮೆ ಬೇಡಿದ ರಣ್ವೀರ್ ಸಿಂಗ್...

Views : 30238+

ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

Views : 30258+

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ: ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್...

Views : 30287+

ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ , ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

Views : 33291+

ಟ್ರಂಪ್ ಪುತ್ರಿ ಇವಾಂಕಾ ಹತ್ಯೆಗೆ ಸಂಚು...!

Views : 33296+

ವಾಹನ ಸವಾರರಿಗೆ ಬಿಗ್ ಶಾಕ್ ! ಸತತ 4ನೇ ಭಾರಿ ತೈಲ ಬೆಲೆ ಏರಿಕೆ ...

Views : 33418+

ಬಿಗ್ ಬಾಸ್ ಸ್ಪರ್ದಿ ನಿರೂಪಕಿ ಜಾಹ್ನವಿ ಜೆಡಿಎಸ್ ಗೆ ಸೇರ್ಪಡೆ ...!

Views : 33512+

ಗಂಡನ ಪ್ರಾಣ ತೆಗೆದ ಹೆಂಡತಿಯ ಕಳ್ಳಾಟ ಬಯಲು ....! ಅನೈತಿಕ ಸಂಬಂಧಕ್ಕೆ ಗಂಡ ಬಲಿ

Views : 33543+

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ! ಹತ್ತು ದಿನದಲ್ಲಿ 3 ನೇ ಭಾರಿ ಏರಿಕೆ

Views : 39089+

ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮಾನವ ಸರಪಳಿ ಪ್ರತಿಭಟನೆಗೆ ಪೊಲೀಸರ ಬ್ರೇಕ್!

Views : 39178+