ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಗಂಡನ ಪ್ರಾಣ ತೆಗೆದ ಹೆಂಡತಿಯ ಕಳ್ಳಾಟ ಬಯಲು ....! ಅನೈತಿಕ ಸಂಬಂಧಕ್ಕೆ ಗಂಡ ಬಲಿ
ವರದಿಗಾರರು : SHOBHA JAGADISH | ಸ್ಥಳ : BANGLORE | ದಿನಾಂಕ : 25-05-2026

ಗಂಡನ ಪ್ರಾಣ ತೆಗೆದ ಹೆಂಡತಿಯ ಕಳ್ಳಾಟ ಬಯಲು ....! ಅನೈತಿಕ ಸಂಬಂಧಕ್ಕೆ ಗಂಡ ಬಲಿ

ಶಿರಾಡಿ ಘಾಟ್‌ನ ಪ್ರಪಾತದಲ್ಲಿ ಅಡಗಿದ್ದ ಆ ಕರಾಳ ರಹಸ್ಯ.ಮೇಲ್ನೋಟಕ್ಕೆ ಅದೊಂದು ಅನ್ಯೋನ್ಯ ದಂಪತಿ. ಗಂಡ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಕಂಪನಿಯ ಒಡೆಯ, ಹೆಂಡತಿ ಮನೆಮಗಳಂತೆ ಲಕ್ಷಣವಾಗಿದ್ದಳು. ಇಬ್ಬರೂ ಒಟ್ಟಿಗೆ ಕಾರಿನಲ್ಲಿ ಹೋದರೆ, ನೋಡುವವರ ಕಣ್ಣು ಕುಕ್ಕುವಂತಿತ್ತು. ಆದರೆ, ಆ ನಗುವಿನ ಮುಖವಾಡದ ಹಿಂದೆ ಹೆಂಡತಿ ಹೆಣೆದಿದ್ದ ಕರಾಳ ಜಾಲದ ಬಗ್ಗೆ ಆ ಪಾಪದ ಗಂಡನಿಗೆ ಸ್ವಲ್ಪವೂ ಅರಿವಿರಲಿಲ್ಲ. ಒಂದು ಅಕ್ರಮ ಸಂಬಂಧ, ಮನುಷ್ಯನನ್ನು ಎಷ್ಟರ ಮಟ್ಟಿಗೆ ಕ್ರೂರಿಯನ್ನಾಗಿ ಮಾಡುತ್ತದೆ ಎಂಬುದಕ್ಕೆ ಶಿರಾಡಿ ಘಾಟ್‌ನಲ್ಲಿ ನಡೆದ ಈ ಘಟನೆ ಜ್ವಲಂತ ಸಾಕ್ಷಿ. ಗಂಡನಿಗೆ ತನ್ನ ಉದ್ಯಮವೇ ಪ್ರಪಂಚವಾಗಿತ್ತು. ವ್ಯವಹಾರದ ಕಾರಣಕ್ಕಾಗಿ ಆತ ಆಗಾಗ ಬೇರೆ ಊರುಗಳಿಗೆ, ವಿದೇಶಗಳಿಗೆ ಪ್ರಯಾಣ ಬೆಳೆಸುತ್ತಿದ್ದ. ಈ ಒಂಟಿತನವನ್ನು ದೂರ ಮಾಡಲು ಹೆಂಡತಿ ಜಿಮ್‌ಗೆ ಹೋಗಲಾರಂಭಿಸಿದಳು. ಅಲ್ಲಿ ಆಕೆಗೆ ಪರಿಚಯವಾದ ಯುವ ಜಿಮ್ ಟ್ರೈನರ್, ಆಕೆಯ ಜೀವನದ ಕರಾಳ ಅಧ್ಯಾಯಕ್ಕೆ ನಾಂದಿ ಹಾಡಿದ. ಗಂಡ ಮನೆಯಲ್ಲಿ ಇಲ್ಲದ ಸಮಯದಲ್ಲಿ ಆ ಜಿಮ್ ಟ್ರೈನರ್ ಮನೆಗೆ ಬರತೊಡಗಿದ. ನೋಡನೋಡುತ್ತಿದ್ದಂತೆಯೇ ಇಬ್ಬರ ನಡುವೆ ಒಂದು ಅಕ್ರಮ ಕಾಮದಾಹದ ಸಂಬಂಧ ಚಿಗುರೊಡೆಯಿತು. ಗಂಡನ ಬೆವರ ಕಾಸಿನಲ್ಲಿ, ಹೆಂಡತಿ ತನ್ನ ಪ್ರಿಯಕರನೊಂದಿಗೆ ಮಂಚದ ಮೇಲೆ ಸ್ವರ್ಗ ಸುಖ ಅನುಭವಿಸುತ್ತಿದ್ದಳು. ದಿನ ಕಳೆದಂತೆ ಈ ಕಳ್ಳಾಟದ ನಶೆ ಇಬ್ಬರಿಗೂ ಅದೆಷ್ಟು ಏರಿತ್ತೆಂದರೆ, ಗಂಡನ ಅಸ್ತಿತ್ವವೇ ಅವರಿಗೆ ದೊಡ್ಡ ಮುಳ್ಳಾಗಿ ಪರಿಣಮಿಸಿತು. ಗಂಡನ ಸಂಪತ್ತೆಲ್ಲವೂ ತಮಗೆ ಸೇರಬೇಕು, ತಾವಿಬ್ಬರೂ ಯಾವ ಅಡೆತಡೆಯಿಲ್ಲದೆ ಬದುಕಬೇಕು ಎಂಬ ದುರಾಸೆ ಇಬ್ಬರ ತಲೆಯಲ್ಲೂ ಹುಳ ಬಿಟ್ಟಿತು. ಗಂಡನನ್ನು ಮುಗಿಸಲು ಅವರು ಆರಿಸಿಕೊಂಡ ದಾರಿ - ಒಂದು ಅಪಘಾತದ ನಾಟಕ. ಒಂದು ವೀಕೆಂಡ್‌ನಲ್ಲಿ ಹೆಂಡತಿ ತಾನೇ ಖುದ್ದಾಗಿ ಗಂಡನನ್ನು ಲಾಂಗ್ ಡ್ರೈವ್‌ಗೆಂದು ಮಂಗಳೂರಿನ ಕಡೆಗೆ ಕರೆದುಕೊಂಡು ಹೊರಟಳು. ಗಂಡನಿಗೆ ಇದು ಹೆಂಡತಿಯ ಪ್ರೀತಿಯ ಕಾಳಜಿ ಎಂದು ಅನಿಸಿತ್ತು, ಆದರೆ ಅದು ತನ್ನ ಪಾಲಿನ ಮರಣಶಾಸನ ಎಂದು ತಿಳಿದಿರಲಿಲ್ಲ. ದಾರಿ ಮಧ್ಯೆ, ಮುಂಚೆಯೇ ಪ್ಲಾನ್ ಮಾಡಿದ್ದಂತೆ ಹೆಂಡತಿ ತಾನು ತಂದಿದ್ದ ಕಾಫಿಯಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ ಗಂಡನಿಗೆ ಕುಡಿಸಿದಳು. ಕೆಲವೇ ನಿಮಿಷಗಳಲ್ಲಿ ಗಂಡ ಗಾಢ ನಿದ್ರೆಗೆ ಜಾರಿದ. ಕಾರು ಶಿರಾಡಿ ಘಾಟ್‌ನ ಆಳವಾದ ಪ್ರಪಾತದ ಬಳಿ ಬಂದು ನಿಂತಿತು. ಅಲ್ಲಿಗಾಗಲೇ ಆಕೆಯ ಪ್ರಿಯಕರ (ಜಿಮ್ ಟ್ರೈನರ್) ಬೈಕ್‌ನಲ್ಲಿ ಬಂದು ಕಾಯುತ್ತಿದ್ದ. ಇಬ್ಬರೂ ಸೇರಿ ಪ್ರಜ್ಞೆತಪ್ಪಿದ್ದ ಗಂಡನನ್ನು ಡ್ರೈವಿಂಗ್ ಸೀಟಿನಲ್ಲಿ ಕೂರಿಸಿದರು. ಕಾರಿನ ಇಂಜಿನ್ ಆನ್ ಮಾಡಿ, ಗೇರ್ ಹಾಕಿ, ಆಳವಾದ ಕಮರಿಗೆ ಕಾರನ್ನು ತಳ್ಳಿಯೇ ಬಿಟ್ಟರು. ಕಾರು ನೂರಾರು ಅಡಿ ಆಳಕ್ಕೆ ಉರುಳಿ ಬಿದ್ದು ನಜ್ಜುಗುಜ್ಜಾಯಿತು. ಪಾಪ, ಗಾಢ ನಿದ್ರೆಯಲ್ಲಿದ್ದ ಗಂಡ, ನಿದ್ರೆಯಲ್ಲೇ ತನ್ನ ಪ್ರಾಣ ಪಕ್ಷಿ ಹಾರಿಹೋಗಿದ್ದನ್ನು ಅರಿಯಲಿಲ್ಲ. ನಂತರ ಶುರುವಾಯಿತು ಹೆಂಡತಿಯ ಅಸಲಿ ನಾಟಕ. ರಸ್ತೆಯಲ್ಲಿ ಹೋಗುವ ವಾಹನಗಳನ್ನು ತಡೆದು ನಿಲ್ಲಿಸಿ, "ನಾವು ವಾಶ್‌ರೂಮ್‌ಗೆಂದು ಕಾರು ನಿಲ್ಲಿಸಿದ್ದೆವು, ಗಂಡ ಆಕಸ್ಮಿಕವಾಗಿ ಬ್ರೇಕ್ ಬದಲು ಆಕ್ಸಿಲರೇಟರ್ ಒತ್ತಿ ಕಾರು ಪ್ರಪಾತಕ್ಕೆ ಬಿತ್ತು" ಎಂದು ಬಿಕ್ಕಿ ಬಿಕ್ಕಿ ಅತ್ತಳು. ಅವಳ ಕಣ್ಣೀರು ಎಷ್ಟೊಂದು ನೈಜವಾಗಿತ್ತೆಂದರೆ, ಅಲ್ಲಿದ್ದವರೆಲ್ಲರೂ ಆಕೆಯ ನಾಟಕಕ್ಕೆ ಕರಗಿಹೋದರು. ಸ್ಥಳಕ್ಕೆ ಬಂದ ಪೊಲೀಸರು, ಮೇಲ್ನೋಟಕ್ಕೆ ಇದೊಂದು ಭೀಕರ ರಸ್ತೆ ಅಪಘಾತ ಎಂದೇ ಭಾವಿಸಿದ್ದರು. ಆದರೆ ಪೋಲಿಸರ ಹದ್ದಿನ ಕಣ್ಣಿಗೆ ಒಂದು ಸಣ್ಣ ಸುಳಿವು ಸಿಕ್ಕಿತು. ಕಾರು ಅಷ್ಟು ಆಳಕ್ಕೆ ಬಿದ್ದಿದ್ದರೂ, ಡ್ರೈವಿಂಗ್ ಸೀಟಿನಲ್ಲಿದ್ದ ಗಂಡನ ದೇಹವು ಅಪಘಾತದ ಸಮಯದಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಯಾವುದೇ ಪ್ರತಿರೋಧ ಒಡ್ಡಿರಲಿಲ್ಲ. ಅಂದರೆ, ಅಪಘಾತ ನಡೆಯುವ ಮುನ್ನವೇ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಎಂಬ ಅನುಮಾನ ಪೊಲೀಸರಿಗೆ ಮೂಡಿತು. ಶವಪರೀಕ್ಷೆಯ (Post-mortem) ವರದಿಯಲ್ಲಿ ಆತನ ದೇಹದಲ್ಲಿ ಮಿತಿಮೀರಿದ ನಿದ್ರೆ ಮಾತ್ರೆಗಳ ಅಂಶ ಪತ್ತೆಯಾಯಿತು. ಪೋಲಿಸರ ಅನುಮಾನ ನೇರವಾಗಿ ಹೆಂಡತಿಯ ಕಡೆಗೆ ತಿರುಗಿತು. ಆಕೆಯ ಮೊಬೈಲ್ ಕರೆಗಳ ವಿವರ (CDR) ತೆಗೆದಾಗ, ಅಪಘಾತದ ದಿನ ಆಕೆಯ ಮತ್ತು ಜಿಮ್ ಟ್ರೈನರ್ ನಡುವೆ ಹತ್ತಾರು ಬಾರಿ ಕರೆಗಳಾಗಿದ್ದವು. ಅಲ್ಲದೆ, ಅಪಘಾತ ನಡೆದ ಸ್ಥಳದ ಮೊಬೈಲ್ ಟವರ್ ಲೊಕೇಶನ್‌ನಲ್ಲಿ ಜಿಮ್ ಟ್ರೈನರ್‌ನ ಮೊಬೈಲ್ ಕೂಡ ಸಕ್ರಿಯವಾಗಿತ್ತು! ಪೋಲಿಸರು ಜಿಮ್ ಟ್ರೈನರ್‌ನನ್ನು ವಶಕ್ಕೆ ಪಡೆದು ತಮ್ಮದೇ ಶೈಲಿಯಲ್ಲಿ ಬೆವರಳಿಸಿದಾಗ, ಆತ ಇಡೀ ಕೊಲೆಯ ಸ್ಕೆಚ್ ಅನ್ನು ಎಳೆಎಳೆಯಾಗಿ ಬಿಚ್ಚಿಟ್ಟ. ಗಂಡನ ಆಸ್ತಿಗೆ ಆಸೆಪಟ್ಟು, ಕಾಮದ ಅಮಲಿನಲ್ಲಿ ತೇಲಿದ್ದ ಆ ಜೋಡಿ ಕೊನೆಗೆ ಪೋಲಿಸರ ಬಲೆಗೆ ಬಿದ್ದಿತು. ಪ್ರೀತಿಯ ನಾಟಕವಾಡಿ ಗಂಡನನ್ನೇ ಬಲಿತೆಗೆದುಕೊಂಡ ಆ ಪಾತಕಿ ಹೆಂಡತಿ ಮತ್ತು ಆಕೆಯ ಪ್ರಿಯಕರ ಈಗ ಜೈಲಿನ ಕಂಬಿ ಎಣಿಸುತ್ತಿದ್ದಾರೆ. ಅಪರಾಧ ಎಷ್ಟೇ ಚಾಣಾಕ್ಷತನದಿಂದ ಮಾಡಿದರೂ, ಯಾವುದೋ ಒಂದು ಸಣ್ಣ ಸುಳಿವು ಕಾನೂನಿನ ಕುಣಿಕೆಗೆ ಸಿಲುಕಿಸುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

ಇತರೆ ಸುದ್ದಿಗಳು

ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ, ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ

Views : 1608+

ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ ?

Views : 1838+

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು

Views : 4301+

ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ 6 ಬಂಪರ್ ಘೋಷಣೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ!

Views : 4479+

ಮೊನಾಲಿಸಾ ಪ್ರಬುದ್ಧಳಾಗಿದ್ದಾಳೆ – ಪತಿಗೆ ಟ್ರಾನ್ಸಿಟ್ ಬೇಲ್‌ ಮಂಜೂರು ಮಾಡಿದ ಕೇರಳ ಹೈಕೋರ್ಟ್

Views : 4500+

ನೂತನ ಸಿಎಂಗೆ ಇಚ್ಛಾಶಕ್ತಿ ಕೊರತೆ ಇದೆ: ಸಿ.ಟಿ.ರವಿ

Views : 4579+

ದೇಶದ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ ಡಿಕೆಶಿ

Views : 7058+

ಇರಾನ್ ಮೇಲೆ ಅಮೆರಿಕ ವಾಯುದಾಳಿ! ರಕ್ಷಣಾತ್ಮಕ ದಾಳಿಗೆ ನಿಯಂತ್ರಣ ಕೇಂದ್ರ ಉಡೀಸ್ ...

Views : 7539+

ದಾವಣಗೆರೆಯ ಕೆ ಟಿ ಜಿ ನಗರ ಅವ್ಯವಸೆಯ ಆಗರ ! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

Views : 7577+

ಡಿ.ಕೆ.ಶಿವಕುಮಾರ್ ಅವರಿಂದ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್

Views : 12772+

ಸಂಪುಟ ರಚನೆಗೆ ಕ್ಷಣಗಣನೆ. ಡಿಕೆಶಿ, ಸಿದ್ದು ದೆಹಲಿಗೆ...

Views : 12896+

ಸತತ 2ನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ RCB...

Views : 13171+

ಹಿಮಾಚಲದಲ್ಲಿ ಭಯಾನಕ ಅಪಘಾತ! ಪ್ರಪಾತಕ್ಕೆ ಬಿದ್ದ ಕಾರ್ ....

Views : 13192+

ರಾಜ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್​​...! ಮುಂದಿನ ಸಿ ಎಂ ಯಾರು ?

Views : 27160+

ಚಾಮುಂಡಿ ತಾಯಿ ಮುಂದೆ ಕ್ಷಮೆ ಬೇಡಿದ ರಣ್ವೀರ್ ಸಿಂಗ್...

Views : 30198+

ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

Views : 30218+

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ: ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್...

Views : 30247+

ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ , ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

Views : 33251+

ಟ್ರಂಪ್ ಪುತ್ರಿ ಇವಾಂಕಾ ಹತ್ಯೆಗೆ ಸಂಚು...!

Views : 33256+

ವಾಹನ ಸವಾರರಿಗೆ ಬಿಗ್ ಶಾಕ್ ! ಸತತ 4ನೇ ಭಾರಿ ತೈಲ ಬೆಲೆ ಏರಿಕೆ ...

Views : 33378+

ಬಿಗ್ ಬಾಸ್ ಸ್ಪರ್ದಿ ನಿರೂಪಕಿ ಜಾಹ್ನವಿ ಜೆಡಿಎಸ್ ಗೆ ಸೇರ್ಪಡೆ ...!

Views : 33472+

ಗಂಡನ ಪ್ರಾಣ ತೆಗೆದ ಹೆಂಡತಿಯ ಕಳ್ಳಾಟ ಬಯಲು ....! ಅನೈತಿಕ ಸಂಬಂಧಕ್ಕೆ ಗಂಡ ಬಲಿ

Views : 33503+

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ! ಹತ್ತು ದಿನದಲ್ಲಿ 3 ನೇ ಭಾರಿ ಏರಿಕೆ

Views : 39048+

ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮಾನವ ಸರಪಳಿ ಪ್ರತಿಭಟನೆಗೆ ಪೊಲೀಸರ ಬ್ರೇಕ್!

Views : 39137+