ಹೆಂಡತಿ ದಪ್ಪ ಇದ್ದಾಳೆ ಎಂದು ಕೊಂದೆ ಬಿಟ್ಟ ಗಂಡ! ಕೊಲೆ ನಾಟಕವಾಡಿ ಸಿಕ್ಕಿಬಿದ್ದ ಚಾಲಾಕಿ
ಆಂಧ್ರಪ್ರದೇಶ : ಮನೆಯಲ್ಲಿದ್ದ ಹೆಂಡತಿ ಜಂಕ್ ಪುಡ್ ತಿಂದು ದಪ್ಪ ಆಗಿದ್ದಾಳೆ, ಹೆಂಡತಿ ದಪ್ಪ ಆಗಿದ್ದು ಗಂಡನಿಗೆ ಬೇಸರ ತಂದಿತ್ತು, ಹೆಂಡತಿ ದಪ್ಪ ಆದ್ಳು ಎಂಬ ಒಂದೇ ಕಾರಣಕ್ಕೆ ಅವಳ ಕೊಲೆ ಮಾಡಿದ್ದಾನೆ ಪಾಪಿ ಗಂಡ. ಆಂಧ್ರಪ್ರದೇಶದ ವೈಎಸ್ ಆರ್ ಕಡಪ ಜಿಲ್ಲೆ ಪ್ರೊದ್ದಟೂರಿನ ಭದ್ರಪಳ್ಳಿ ಏಪ್ರಿಲ್ 29 ರಂದು ಘಟನೆ ನಡೆದಿದ್ದು, 31 ವರ್ಷದ ಪದ್ಮಜಾ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಳು, ಮರಣೋತ್ತರ ಪರೀಕ್ಷೆಯಲ್ಲಿ ಬಂದ ವರದಿಯಲ್ಲಿ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಅಂದಹಾಗೇ ಆಕೆಯ ಗಂಡನೇ ಕೊಲೆ ಆರೋಪಿಯಾಗಿದ್ದ. ಮೃತ ಪದ್ಮಜಾ ವೈಎಸ್ ಆರ್ ಕಡಪ ಜಿಲ್ಲೆ ಮುದ್ದನೂರಿನ ಕೊತ್ತಕೊಟುರು ಗ್ರಾಮದವಳು, 8 ವರ್ಷಗಳ ಹಿಂದೆ ಕಿರಣ್ ಜೊತೆ ಪದ್ಮಜಾಳ ಮದುವೆಯಾಗಿದ್ದು, ಇವರ ದಾಪಂತ್ಯಕ್ಕೆ ಒಬ್ಬ ಮಗಳಿದ್ದಾಳೆ, ಪದ್ಮಜಾ ಒಬ್ಬಳೇ ಮಗಳಾಗಿದ್ದ ಕಾರಣಕ್ಕೆ ಮನೆ ಅಳಿಯನಾಗಿ ಕಿರಣ್ ಅತ್ತೆ ಮನೆಯಲ್ಲಿ ವಾಸವಾಗಿದ್ದ. ತವರು ಮನೆಯಲ್ಲಿದ್ದ ಕಾರಣಕ್ಕೆ ಸಹಜವಾಗಿ ಪದ್ಮಜಾ ಖುಷಿಯಾಗಿದ್ದಳು, ತಿಂಡಿಪೋತಿಯಾಗಿದ್ದ ಆಕೆ ಸದಾ ಜಂಕ್ ಪುಡ್ ಮಾಂಸಹಾರ ಸೇವನೆ ಮಾಡುತ್ತಿದ್ದಳು, ಇದರಿಂದ ದಪ್ಪ ಆಗಿದ್ದಾಳೆ, ಹೆಂಡತಿ ದಪ್ಪ ಆಗಿದ್ದು ಗಂಡನಿಗೆ ಇಷ್ಟ ಇರಲಿಲ್ಲ. ಹೆಂಡತಿ ದಪ್ಪ ಅದಳೆಂಬ ಕಾರಣಕ್ಕೆ ಆಕೆಯನ್ನ ಕೊಲ್ಲುವ ನಿರ್ಧಾರ ಮಾಡಿದ್ದ ಕಿರಣ್, ಹೆಂಡತಿಯನ್ನ ಕೊಲ್ಲುವುದಕ್ಕಾಗಿ ಗೂಗಲ್ ನಲ್ಲಿ ಮಾಹಿತಿ ಕಲೆ ಹಾಕಿದ್ದಾನೆ. ಹೆಂಡತಿಗೆ ವಿಷ ಹಾಕಿ ಕೊಲ್ಲುವ ತಿರ್ಮಾನ ಮಾಡಿದ ಆತ 80 ಸಾವಿರ ಹಣ ಕೊಟ್ಟು ವಿಷವನ್ನ ತನ್ನ ಮನೆಗೆ ಅರ್ಡರ್ ಮಾಡಿದ್ದಾನೆ. ಹೆಂಡತಿ ಮತ್ತು ಮಗಳನ್ನು ಭದ್ರಪಳ್ಳಿಯ ಮನೆಗೆ ಕರೆದುಕೊಂಡು ಹೋಗಿದ್ದಾನೆ, ಏಪ್ರಿಲ್ 29ರಂದು ಸಿಹಿ ಪದಾರ್ಥದಲ್ಲಿ ವಿಷವನ್ನು ಬೆರಸಿ ಹೆಂಡತಿಗೆ ತಿನ್ನಿಸಿದ್ದಾನೆ, ತಕ್ಷಣವೇ ಆಕೆ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದಾಳೆ, ದಿಂಬಿನಿಂದ ಉಸಿರುಗಟ್ಟಿಸಿ ಅವಳ ಉಸಿರು ತೆಗೆದಿದ್ದಾನೆ, 3 ಗಂಟೆಗಳ ನಂತರ ರೂಮ್ ನಿಂದ ಹೊರ ಬಂದ ಕಿರಣ್ ಹೆಂಡತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆಂದು ಎಲ್ಲರ ಮುಂದೆ ನಾಟಕವಾಡಿದ. ಪದ್ಮಜಾಳ ಸಾವು ಮತ್ತು ಗಂಡ ಕಿರಣ್ ನಡವಳಿಕೆಯ ಬಗ್ಗೆ ಅನುಮಾನ ಇದ್ದ ಪೊಲೀಸರು ಶವವನ್ನ ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ, ಮರಣೋತ್ತರ ಪರೀಕ್ಷೆಯಲ್ಲಿ ಬಂದ ವರದಿಯಲ್ಲಿ ವಿಷವುಣಿಸಿ ಸಾಯಿಸಲಾಗಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ, ಕಿರಣ್ ನನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾಗ ಹೆಂಡತಿ ದಪ್ಪ ಅದ್ಳು ಎಂಬ ಕಾರಣಕ್ಕೆ ಕೊಂದಿದ್ದಾಗಿ ತಪ್ಪೋಪ್ಪಿಕೊಂಡಿದ್ದಾನೆ.