ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಹೆಂಡತಿ ವಿರುದ್ಧ ಸಾಲು ಸಾಲು ಆರೋಪ ಮಾಡಿದ ನಟ ಜಯಂ ರವಿ ! ಡಿವೋರ್ಸ್ ಸಿಗೋವರೆಗೂ ಸಿನಿಮಾ ಮಾಡಲ್ಲಾ ...
ವರದಿಗಾರರು : SHOBHA JAGADISH | ಸ್ಥಳ : BANGLORE | ದಿನಾಂಕ : 18-05-2026

ಹೆಂಡತಿ ವಿರುದ್ಧ ಸಾಲು ಸಾಲು ಆರೋಪ ಮಾಡಿದ ನಟ ಜಯಂ ರವಿ ! ಡಿವೋರ್ಸ್ ಸಿಗೋವರೆಗೂ ಸಿನಿಮಾ ಮಾಡಲ್ಲಾ ...

ಚೆನ್ನೈ: ತಮಿಳು ನಟ ಜಯಂ ರವಿ ಅವರ ಕೌಟುಂಬಿಕ ಕಲಹ ಜೋರಾಗಿದೆ. ಪತ್ನಿಯಿಂದ ಡಿವೋರ್ಸ್ ಸಿಗೋವರೆಗೂ ನಾನು ಯಾವುದೇ ಸಿನಿಮಾ ಮಾಡಲ್ಲ ಅಂತ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಕೌಟುಂಬಿಕ ಕಲಹದ ಬಗ್ಗೆ ಮಾತನಾಡಿದ ಅವರು, ಹೆಂಡತಿ ಬಗ್ಗೆ ಹೆಚ್ಚು ಮಾತಾಡೋದು ಬೇಡ ಅಂತ ಇಷ್ಟು ದಿನ ಬಾಯಿ ಮುಚ್ಚಿಕೊಂಡಿದ್ದೆ. ಆದರೆ, ಈಗ ಆಕೆ ಇಲ್ಲಸಲ್ಲದ ಆರೋಪ ಮಾಡ್ತಿದ್ದಾಳೆ. ಇನ್ನು ಸುಮ್ಮನಿರೋಕೆ ಆಗಲ್ಲ. ನನ್ನ ಮಕ್ಕಳನ್ನು ಭೇಟಿಯಾಗಲೂ ಬಿಡ್ತಿಲ್ಲ. ಇಬ್ಬರೂ ಮಕ್ಕಳ ಸ್ಕೂಲ್ ಫೀಸ್‌ನ್ನ ನಾನು 8 ವರ್ಷದಿಂದ ಕಟ್ಟುತ್ತಿದ್ದೇನೆ. ಈವರೆಗೆ 50 ಲಕ್ಷ ರೂ. ಖರ್ಚು ಮಾಡಿದ್ದೇನೆ. ಮಕ್ಕಳ ಮೇಲಿನ ಪ್ರೀತಿ ಬಗ್ಗೆ ಯಾರು ಮಾತನಾಡುತ್ತಿಲ್ಲ. ಮಕ್ಕಳ ಮೇಲೆ ಪ್ರೀತಿ ಇಲ್ಲ ಅಂತಾ ನನ್ನನ್ನೇ ಪ್ರಶ್ನಿಸುತ್ತಾರೆ, ಅನುಮಾನಪಡುತ್ತಾರೆ. ಸ್ಕೂಲ್‌ಗೆ ಬಾಡಿಗಾರ್ಡ್ ಜೊತೆ ಕಳುಹಿಸುತ್ತಾರೆ. ನನಗೆ ಇಷ್ಟ ಇಲ್ಲದೇ ಈ ಜೀವನದಿಂದ ಹೊರಬಂದಿದ್ದೇನೆ. ನಾನು ಮಾಡಿದ್ದೆಲ್ಲಾ ಅವಳಿಗೋಸ್ಕರನೇ ಎಂದು ಪತ್ನಿ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾರೆ. ನಾನು ವೈಯಕ್ತಿಕ ಬ್ಯಾಂಕ್ ಖಾತೆಯನ್ನೂ ಹೊಂದಿಲ್ಲ. ಎಲ್ಲವನ್ನೂ ಹೆಂಡತಿ ಜೊತೆ ಜಂಟಿ ಖಾತೆ ಹೊಂದಿದ್ದೇನೆ. ನಾನು ದುಡಿದ್ದಿದ್ದನ್ನೆಲ್ಲ ಅವಳಿಗೆ ಕೊಟ್ಟಿದ್ದೇನೆ. ನಾನು ಖರ್ಚು ಮಾಡಿದ ಒಂದೊಂದು ಪೈಸೆ ಬಗ್ಗೆಯೂ ಅವಳು ಲೆಕ್ಕ ಕೇಳುತ್ತಿದ್ದಳು. ನನ್ನ ಪೋಷಕರ ವಿರೋಧದ ನಡುವೆಯೂ ಆರತಿಯನ್ನು ಮದುವೆ ಆದೆ. ಈಗ ಪಶ್ಚಾತ್ತಾಪಡುವಂತಾಗಿದೆ. ಪತ್ನಿಯಿಂದ ಡಿವೋರ್ಸ್ ಸಿಗೋವರೆಗೂ ನಾನು ಯಾವುದೇ ಸಿನಿಮಾ ಮಾಡಲ್ಲ ಎಂದು ಕಣ್ಣೀರು ಸುರಿಸಿದ್ದಾರೆ. ನನ್ನನ್ನು ಮಹಿಳಾ ವಿರೋಧಿ ಅಂತ ಬಿಂಬಿಸ್ತಿದ್ದಾರೆ. ಆದರೆ, ನನ್ನ ಸಿನಿಮಾಗಳನ್ನು ನೋಡಿ. ನನ್ನ ಸಿನಿಮಾಗಳಲ್ಲಿನ ಸಂದೇಶದಂತೆ ನಾನು ನಡೆದುಕೊಂಡಿದ್ದೇನೆ. ಆದರೀಗ, ಹೆಂಡತಿಯಿಂದ ಮಾನಸಿಕವಾಗಿ ನೊಂದಿದ್ದು, ಇದರಿಂದ ಹೊರಬರಲು ಕೈಯನ್ನೆಲ್ಲಾ ಕೊಯ್ದುಕೊಂಡಿದ್ದೇನೆ. ನಾನು ಹೋಗ್ತೀನಿ, ಆದ್ರೆ ನನ್ನ ಜೀವನ ಹಾಳು ಮಾಡಿದ ಎಲ್ಲರ ಕಥೆ ಮುಗಿಸಿ ಬಳಿಕ ಹೋಗ್ತೀನಿ ಅಂತ ಅಬ್ಬರಿಸಿದ್ದಾರೆ. ಗೆಳತಿ, ಗಾಯಕಿ ಕೆನಿಶಾ ಜೊತೆಗಿನ ಸಂಬಂಧದಿಂದಾಗಿ ಪತ್ನಿ ಆರತಿ ಡಿವೋಸ್ ಕೇಳಿದ್ದು, ತಿಂಗಳಿಗೆ 40 ಲಕ್ಷ ರೂ. ಪರಿಹಾರವನ್ನೂ ಕೇಳಿದ್ದಾರೆ. ಇದು ಕೋರ್ಟ್‌ನಲ್ಲಿದ್ದು ಇತ್ಯರ್ಥವಾಗಿಲ್ಲ. ಈ ಮಧ್ಯೆ, ಗೆಳತಿ ಕೆನಿಶಾ ಕೂಡ ದೂರಾಗಿದ್ದು, ಆಕೆಯನ್ನು ದೂರ ಮಾಡಿದವರ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.

ಇತರೆ ಸುದ್ದಿಗಳು

ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ, ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ

Views : 1648+

ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ ?

Views : 1878+

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು

Views : 4341+

ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ 6 ಬಂಪರ್ ಘೋಷಣೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ!

Views : 4519+

ಮೊನಾಲಿಸಾ ಪ್ರಬುದ್ಧಳಾಗಿದ್ದಾಳೆ – ಪತಿಗೆ ಟ್ರಾನ್ಸಿಟ್ ಬೇಲ್‌ ಮಂಜೂರು ಮಾಡಿದ ಕೇರಳ ಹೈಕೋರ್ಟ್

Views : 4540+

ನೂತನ ಸಿಎಂಗೆ ಇಚ್ಛಾಶಕ್ತಿ ಕೊರತೆ ಇದೆ: ಸಿ.ಟಿ.ರವಿ

Views : 4619+

ದೇಶದ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ ಡಿಕೆಶಿ

Views : 7098+

ಇರಾನ್ ಮೇಲೆ ಅಮೆರಿಕ ವಾಯುದಾಳಿ! ರಕ್ಷಣಾತ್ಮಕ ದಾಳಿಗೆ ನಿಯಂತ್ರಣ ಕೇಂದ್ರ ಉಡೀಸ್ ...

Views : 7579+

ದಾವಣಗೆರೆಯ ಕೆ ಟಿ ಜಿ ನಗರ ಅವ್ಯವಸೆಯ ಆಗರ ! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

Views : 7617+

ಡಿ.ಕೆ.ಶಿವಕುಮಾರ್ ಅವರಿಂದ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್

Views : 12812+

ಸಂಪುಟ ರಚನೆಗೆ ಕ್ಷಣಗಣನೆ. ಡಿಕೆಶಿ, ಸಿದ್ದು ದೆಹಲಿಗೆ...

Views : 12936+

ಸತತ 2ನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ RCB...

Views : 13211+

ಹಿಮಾಚಲದಲ್ಲಿ ಭಯಾನಕ ಅಪಘಾತ! ಪ್ರಪಾತಕ್ಕೆ ಬಿದ್ದ ಕಾರ್ ....

Views : 13232+

ರಾಜ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್​​...! ಮುಂದಿನ ಸಿ ಎಂ ಯಾರು ?

Views : 27200+

ಚಾಮುಂಡಿ ತಾಯಿ ಮುಂದೆ ಕ್ಷಮೆ ಬೇಡಿದ ರಣ್ವೀರ್ ಸಿಂಗ್...

Views : 30238+

ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

Views : 30258+

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ: ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್...

Views : 30287+

ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ , ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

Views : 33291+

ಟ್ರಂಪ್ ಪುತ್ರಿ ಇವಾಂಕಾ ಹತ್ಯೆಗೆ ಸಂಚು...!

Views : 33296+

ವಾಹನ ಸವಾರರಿಗೆ ಬಿಗ್ ಶಾಕ್ ! ಸತತ 4ನೇ ಭಾರಿ ತೈಲ ಬೆಲೆ ಏರಿಕೆ ...

Views : 33418+

ಬಿಗ್ ಬಾಸ್ ಸ್ಪರ್ದಿ ನಿರೂಪಕಿ ಜಾಹ್ನವಿ ಜೆಡಿಎಸ್ ಗೆ ಸೇರ್ಪಡೆ ...!

Views : 33512+

ಗಂಡನ ಪ್ರಾಣ ತೆಗೆದ ಹೆಂಡತಿಯ ಕಳ್ಳಾಟ ಬಯಲು ....! ಅನೈತಿಕ ಸಂಬಂಧಕ್ಕೆ ಗಂಡ ಬಲಿ

Views : 33543+

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ! ಹತ್ತು ದಿನದಲ್ಲಿ 3 ನೇ ಭಾರಿ ಏರಿಕೆ

Views : 39089+

ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮಾನವ ಸರಪಳಿ ಪ್ರತಿಭಟನೆಗೆ ಪೊಲೀಸರ ಬ್ರೇಕ್!

Views : 39178+