ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

  ಶ್ರೀಮಂತರ ಮದ್ಯ ಅಗ್ಗ, ಬಡವರ ಮದ್ಯ ದುಬಾರಿ! ಕುಡುಕರ ಕಿಕ್ ಹೆಚ್ಚಿಸಿದ ಸರ್ಕಾರ
ವರದಿಗಾರರು : SHOBHA JAGAISH | ಸ್ಥಳ : BANGLORE | ದಿನಾಂಕ : 12-05-2026

ಶ್ರೀಮಂತರ ಮದ್ಯ ಅಗ್ಗ, ಬಡವರ ಮದ್ಯ ದುಬಾರಿ! ಕುಡುಕರ ಕಿಕ್ ಹೆಚ್ಚಿಸಿದ ಸರ್ಕಾರ

ಕರ್ನಾಟಕ ಸರ್ಕಾರವು ಬಹುದಿನಗಳಿಂದ ಚರ್ಚೆಯಲ್ಲಿದ್ದ ಹೊಸ ಅಬಕಾರಿ ನೀತಿಯನ್ನು ಸೋಮವಾರದಿಂದ ಅಂದರೆ ಮೇ 11 ಅಧಿಕೃತವಾಗಿ ಜಾರಿಗೆ ತಂದಿದೆ. ದಶಕಗಳ ಹಳೆಯದಾದ ಅಬಕಾರಿ ತೆರಿಗೆ ಪದ್ಧತಿಯನ್ನು ಕೈಬಿಟ್ಟು, ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣಕ್ಕೆ ಅನುಗುಣವಾಗಿ ತೆರಿಗೆ ವಿಧಿಸುವ ಮಾದರಿಯನ್ನು ಅಳವಡಿಸಿಕೊಂಡಿದೆ. ಈ ಮೂಲಕ, ಈ ಮಾದರಿಯ ಅಬಕಾರಿ ನೀತಿ ಅಳವಡಿಸಿಕೊಂಡ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಆದರೆ, ಈ ಬದಲಾವಣೆಯಿಂದ ಜನಸಾಮಾನ್ಯರು ಬಳಸುವ ಕಡಿಮೆ ಬೆಲೆಯ ಮದ್ಯದ ದರವನ್ನು ಏರಿಕೆ ಮಾಡಲಿದ್ದು, ಪ್ರೀಮಿಯಂ ಅಥವಾ ವಿದೇಶಿ ಬ್ರಾಂಡ್‌ಗಳ ಮದ್ಯದ ಬೆಲೆ ಇಳಿಕೆಯಾಗಲಿದೆ. 16 ಸ್ಲ್ಯಾಬ್‌ಗಳಿದ್ದ ಅಬಕಾರಿ ತೆರಿಗೆ ವ್ಯವಸ್ಥೆಯನ್ನು 8 ಸ್ಲ್ಯಾಬ್‌ಗಳಿಗೆ ಇಳಿಸಿದ ಸರ್ಕಾರ.ಸಾಮಾನ್ಯ ಮದ್ಯದ ಬೆಲೆ (180 ಮಿ.ಲೀ) 20-30% ರಷ್ಟು ಏರಿಕೆ, ಪ್ರೀಮಿಯಂ ಬ್ರಾಂಡ್‌ಗಳ ಬೆಲೆ 16-20% ರಷ್ಟು ಇಳಿಕೆ. ಇನ್ನೊಂದೆಡೆ, ಶ್ರೀಮಂತರು ಬಳಸುವ ಅಥವಾ ವಿದೇಶಿ ಮೂಲದ ಪ್ರೀಮಿಯಂ ಬ್ರಾಂಡ್‌ಗಳಾದ ಡಿಯಾಜಿಯೊ, ಪೆರ್ನಾಡ್ ರಿಕಾರ್ಡ್ ಮತ್ತು ಯುನೈಟೆಡ್ ಸ್ಪಿರಿಟ್ಸ್‌ನಂತಹ ಕಂಪನಿಗಳ ಮದ್ಯದ ಬೆಲೆ ಶೇ 16 ರಿಂದ 20 ರಷ್ಟು ಇಳಿಕೆಯಾಗಲಿದೆ. 6 ರಿಂದ 8ನೇ ಸ್ಲ್ಯಾಬ್‌ನಲ್ಲಿ ಬರುವ ಈ ಪಾನೀಯಗಳ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ 10-15 ರಷ್ಟು ಕಡಿಮೆ ಮಾಡಲಾಗಿದೆ. ಇದರಿಂದ ಬಹುರಾಷ್ಟ್ರೀಯ ಕಂಪನಿಗಳಿಗೆ ದೊಡ್ಡ ಮಟ್ಟದ ಲಾಭವಾಗಲಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಸರ್ಕಾರದ ಈ ಕ್ರಮವು ಸ್ಥಳೀಯ ಮದ್ಯ ತಯಾರಿಕಾ ಘಟಕಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಕೆಬಿಡಿಎ ಆತಂಕ ವ್ಯಕ್ತಪಡಿಸಿದೆ. ದೊಡ್ಡ ಕಂಪನಿಗಳು ಬೆಲೆ ಏರಿಳಿತವನ್ನು ಸರಿದೂಗಿಸಿಕೊಳ್ಳಬಲ್ಲವು. ಆದರೆ ಬಜೆಟ್ ಮದ್ಯವನ್ನೇ ನೆಚ್ಚಿಕೊಂಡಿರುವ ಸಣ್ಣ ಪ್ರಾದೇಶಿಕ ಘಟಕಗಳು ವ್ಯವಹಾರ ಕುಸಿತದ ಭೀತಿಯಿಂದಾಗಿ ಮುಚ್ಚುವ ಹಂತಕ್ಕೆ ತಲುಪಬಹುದು ಎಂದು ಸಂಘದ ಸದಸ್ಯರು ದೂರಿದ್ದಾರೆ.

ಇತರೆ ಸುದ್ದಿಗಳು

ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ, ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ

Views : 1648+

ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ ?

Views : 1878+

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು

Views : 4341+

ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ 6 ಬಂಪರ್ ಘೋಷಣೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ!

Views : 4519+

ಮೊನಾಲಿಸಾ ಪ್ರಬುದ್ಧಳಾಗಿದ್ದಾಳೆ – ಪತಿಗೆ ಟ್ರಾನ್ಸಿಟ್ ಬೇಲ್‌ ಮಂಜೂರು ಮಾಡಿದ ಕೇರಳ ಹೈಕೋರ್ಟ್

Views : 4540+

ನೂತನ ಸಿಎಂಗೆ ಇಚ್ಛಾಶಕ್ತಿ ಕೊರತೆ ಇದೆ: ಸಿ.ಟಿ.ರವಿ

Views : 4619+

ದೇಶದ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ ಡಿಕೆಶಿ

Views : 7098+

ಇರಾನ್ ಮೇಲೆ ಅಮೆರಿಕ ವಾಯುದಾಳಿ! ರಕ್ಷಣಾತ್ಮಕ ದಾಳಿಗೆ ನಿಯಂತ್ರಣ ಕೇಂದ್ರ ಉಡೀಸ್ ...

Views : 7579+

ದಾವಣಗೆರೆಯ ಕೆ ಟಿ ಜಿ ನಗರ ಅವ್ಯವಸೆಯ ಆಗರ ! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

Views : 7617+

ಡಿ.ಕೆ.ಶಿವಕುಮಾರ್ ಅವರಿಂದ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್

Views : 12812+

ಸಂಪುಟ ರಚನೆಗೆ ಕ್ಷಣಗಣನೆ. ಡಿಕೆಶಿ, ಸಿದ್ದು ದೆಹಲಿಗೆ...

Views : 12936+

ಸತತ 2ನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ RCB...

Views : 13211+

ಹಿಮಾಚಲದಲ್ಲಿ ಭಯಾನಕ ಅಪಘಾತ! ಪ್ರಪಾತಕ್ಕೆ ಬಿದ್ದ ಕಾರ್ ....

Views : 13232+

ರಾಜ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್​​...! ಮುಂದಿನ ಸಿ ಎಂ ಯಾರು ?

Views : 27200+

ಚಾಮುಂಡಿ ತಾಯಿ ಮುಂದೆ ಕ್ಷಮೆ ಬೇಡಿದ ರಣ್ವೀರ್ ಸಿಂಗ್...

Views : 30238+

ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

Views : 30258+

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ: ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್...

Views : 30287+

ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ , ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

Views : 33291+

ಟ್ರಂಪ್ ಪುತ್ರಿ ಇವಾಂಕಾ ಹತ್ಯೆಗೆ ಸಂಚು...!

Views : 33296+

ವಾಹನ ಸವಾರರಿಗೆ ಬಿಗ್ ಶಾಕ್ ! ಸತತ 4ನೇ ಭಾರಿ ತೈಲ ಬೆಲೆ ಏರಿಕೆ ...

Views : 33418+

ಬಿಗ್ ಬಾಸ್ ಸ್ಪರ್ದಿ ನಿರೂಪಕಿ ಜಾಹ್ನವಿ ಜೆಡಿಎಸ್ ಗೆ ಸೇರ್ಪಡೆ ...!

Views : 33512+

ಗಂಡನ ಪ್ರಾಣ ತೆಗೆದ ಹೆಂಡತಿಯ ಕಳ್ಳಾಟ ಬಯಲು ....! ಅನೈತಿಕ ಸಂಬಂಧಕ್ಕೆ ಗಂಡ ಬಲಿ

Views : 33543+

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ! ಹತ್ತು ದಿನದಲ್ಲಿ 3 ನೇ ಭಾರಿ ಏರಿಕೆ

Views : 39089+

ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮಾನವ ಸರಪಳಿ ಪ್ರತಿಭಟನೆಗೆ ಪೊಲೀಸರ ಬ್ರೇಕ್!

Views : 39178+