ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಇಂದು ಜನವರಿ 12, ಸ್ವಾಮಿ ವಿವೇಕಾನಂದರ 163ನೇ ಜನ್ಮದಿನ"
ವರದಿಗಾರರು : ಮಮತಾ | ಸ್ಥಳ : Bengaluru | ದಿನಾಂಕ : 12-01-2026

ಇಂದು ಜನವರಿ 12, ಸ್ವಾಮಿ ವಿವೇಕಾನಂದರ 163ನೇ ಜನ್ಮದಿನ"

ಶ್ರೀಕೃಷ್ಣನನ್ನು ಅರಿಯಬೇಕೆಂದರೆ ಭಗವದ್ಗೀತೆಯನ್ನು ಓದಿ, ಭಾರತವನ್ನು ತಿಳಿಯಬೇಕೆಂದರೆ ಸ್ವಾಮಿ ವಿವೇಕಾನಂದರನ್ನು ಓದಿ' ಎಂದು ಕವಿ ರವೀಂದ್ರನಾಥ ಠಾಗೂರರು ಹೇಳುತ್ತಾರೆ. ವಿವೇಕಾನಂದರ ಬದುಕೇ ಇಡೀ ಭಾರತದ ಚಿತ್ರಣವಾಗಿದೆ. ಅವರ ಜೀವನದಲ್ಲಿ ಘಟಿಸಿದ ಪ್ರಸಂಗಗಳು ಯಶೋಗಾಥೆಯಷ್ಟೇ ಅಲ್ಲ ದಾರಿ ದೀಪವೂ ಹೌದು.

ಇಂದು ಜನವರಿ 12, ಸ್ವಾಮಿ ವಿವೇಕಾನಂದರ 163ನೇ ಜನ್ಮದಿನ. ವಿಶ್ವವನ್ನೇ ಬೆರಗುಗೊಳಿಸಿದ ಭಾರತದ ವೀರ ಸನ್ಯಾಸಿಯ ಜನ್ಮದಿನವನ್ನು 'ರಾಷ್ಟ್ರೀಯ ಯುವ ದಿನ'ವನ್ನಾಗಿ ಆಚರಿಸಲಾಗುತ್ತದೆ. ಭಾರತದತ್ತ ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡಿವೆ.

ತಾಯಿಗೆ ದೂರುಗಳ ಮಾಲೆ ವಿವೇಕಾನಂದರಿಗೆ ಬಾಲ್ಯದಲ್ಲಿತಾಯಿ 'ವೀರೇಶ್ವರ' ಎಂದು ಹೆಸರಿಟ್ಟರು. ಬಂಗಾಳಿಯಲ್ಲಿ ಬೀರೇಶ್ವರ. ಸ್ನೇಹಿತರು ಪ್ರೀತಿಯಿಂದ ಅವನನ್ನು 'ಬಿಲೇ' ಎಂದು ಕರೆಯುತ್ತಿದ್ದರು. ಶಾಲೆಗೆ ಸೇರಿಸುವಾಗ ಅವನ ಹೆಸರನ್ನು ಔಪಚಾರಿಕವಾಗಿ ನರೇಂದ್ರನಾಥ ದತ್ತ ಎಂದು ಬದಲಿಸಲಾಯಿತು.

ಶಾಲೆಯಲ್ಲಿಎಲ್ಲರೂ ಅವನನ್ನು ನರೇನ್‌ ಎಂದು ಕರೆದರು. ಬಿಲೇ ಚೂಟಿಯಾದ ಬುದ್ಧಿಶಾಲಿ ಮಗು, ತುಂಟ. ಶ್ರೀಕೃಷ್ಣ ಮಗುವಾಗಿದ್ದಾಗ ಯಶೋದೆಗೆ ಅವನ ಮೇಲೆ ಹೇಗೆ ದೂರುಗಳು ಬರುತ್ತಿದ್ದವೋ ಹಾಗೆಯೇ ಬಿಲೆಯ ತುಂಟತನದ ಮೇಲೆಯೂ ತಾಯಿ ಭುವನೇಶ್ವರಿಯ ಹತ್ತಿರ ದೂರುಗಳು ಬರುತ್ತಿದ್ದವು. ಅದಕ್ಕೇ ಅವನ ಮಿತ್ರರು ಅವನಿಗೆ 'ಪಗಲಾ ಬಿಲೇ' (ಹುಚ್ಚು ಬಿಲೆ) ಎಂದು ಅಡ್ಡ ಹೆಸರಿಟ್ಟಿದ್ದರು. ಇತನ ಚೇಷ್ಟೆ ತಾಳಲಾರದೇ ತಾಯಿ ಭುವನೇಶ್ವರಿ ದೇವಿ, ''ಶಿವನನ್ನು ಮಗನಿಗಾಗಿ ಕೇಳಿಕೊಂಡೆ. ಅವನು ತನ್ನ ತುಂಟ ರಾಕ್ಷಸನನ್ನು ಕಳುಹಿಸಿದ್ದಾನೆ,'' ಎಂದು ತಮಾಷೆಯಾಗಿ ಹೇಳುತ್ತಿದ್ದಳು.

ನನಗೂ ಇಂಗ್ಲೀಷ್‌ ಬರುತ್ತೆ! ಒಂದು ಸಲ ರಜಪುಟಾನದಲ್ಲಿರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಅವರ ಜೊತೆ ಇಬ್ಬರು ಆಂಗ್ಲರು ಪ್ರಯಾಣಿಸುತ್ತಿದ್ದರು. ವಿವೇಕಾನಂದರನ್ನು ಮೂಢ ಎಂದು ತಿಳಿದು ಅವರು ತಮ್ಮ ಭಾಷೆಯಲ್ಲಿ ಮಾತನಾಡುತ್ತಾ ಗೇಲಿ ಮಾಡಿದರು. ಇದನ್ನು ಕೇಳಿಯೂ ಅರ್ಥಮಾಡಿಕೊಳ್ಳದಿದ್ದ ಹಾಗೆ ವಿವೇಕಾನಂದರು ಸುಮ್ಮನಿದ್ದರು.

ಮುಂದಿನ ರೈಲು ನಿಲ್ದಾಣದಲ್ಲಿಇನ್ನೊಬ್ಬ ಬ್ರಿಟಿಷ್‌ ಅಧಿಕಾರಿ ಬಂದು ವಿವೇಕಾನಂದರನ್ನು ಗುರುತಿಸಿ, ''ಏನಾದರೂ ಬೇಕೇ?,'' ಎಂದು ಕೇಳಿದಾಗ ಅವರು ಇಂಗ್ಲಿಷಿನಲ್ಲಿ ತಮಗೆ ಕುಡಿಯಲು ನೀರು ಬೇಕೆಂದು ಕೇಳಿದರು. ಆಗ ಗೇಲಿ ಮಾಡಿದ್ದ ಆಂಗ್ಲಸಹಪ್ರಯಾಣಿಕರು ತಮ್ಮ ನಡವಳಿಕೆಗೆ ತಾವೇ ನಾಚಿಕೊಂಡು ಕ್ಷಮೆಯಾಚಿಸಿದರು. ಮಗು ಬೇಕೆಂದವಳಿಗೆ ತಾವೇ ಮಗುವಾದರು !

ವಿವೇಕಾನಂದರಿಂದ ಪ್ರಭಾವಿತರಾಗಿದ್ದ ವಿದೇಶಿ ಮಹಿಳೆಯೊಬ್ಬರು ಸನ್ಯಾಸಿಯಾಗಿದ್ದರೂ ಸಹ ಅವರನ್ನು ವಿವಾಹವಾಗಿ ಅವರಂಥ ಗುಣಗಳಿರುವ ಮಗುವನ್ನು ಪಡೆಯುವ ಆಸೆಯನ್ನು ವ್ಯಕ್ತಪಡಿಸಿದಳು. ಆಗ ವಿವೇಕಾನಂದರು ನಾನೇ ನಿಮ್ಮ ಮಗು ಭಾವಿಸಿ ಎಂದು ಹೇಳುವ ಮೂಲಕ ಆ ಮಹಿಳೆಯನ್ನು ಚಕಿತರನ್ನಾಗಿಸಿ ಆಕೆಯ ಆಸೆಯನ್ನು ಪೂರ್ಣಗೊಳಿಸಿ, ತಮಗಿರುವ ಅಲೌಕಿಕ ಮತ್ತು ಆಧ್ಯಾತ್ಮಿಕ ವ್ಯಕ್ತಿತ್ವವನ್ನು ತೆರೆದಿಟ್ಟರು.

1893ರಲ್ಲಿಅಮೆರಿಕಕ್ಕೆ ಭೇಟಿ ನೀಡಿದ್ದ ಸ್ವಾಮಿ ವಿವೇಕಾನಂದರು ಕೇಸರಿ ವಸ್ತ್ರ ಧರಿಸಿ ಶಿಕಾಗೊ ನಗರದ ಪ್ರಮುಖ ರಸ್ತೆಗಳಲ್ಲಿಓಡಾಡಿದರು. ಅಮೆರಿಕನ್ನರಿಗದು ಸಂಪೂರ್ಣ ಹೊಸತು. ಹಾಗಾಗಿ ದಾರಿಯಲ್ಲಿಒಬ್ಬ ಮಹಿಳೆ ತನ್ನೊಂದಿಗಿದ್ದ ಪತಿಯ ಕಿವಿಯಲ್ಲಿಪಿಸುಗುಟ್ಟಿದಳು. ಆ ಮಹಿಳೆ ''ನನಗನ್ನಿಸುತ್ತೆ ಈ ವ್ಯಕ್ತಿ ಒಬ್ಬ ಸಂಭಾವಿತ ಎನಿಸುತ್ತಿಲ್ಲ,'' ಎಂದಳು. ಈ ಮಾತು ವಿವೇಕಾನಂದರ ಕಿವಿಗೆ ತಾಕಿತು. ಕೂಡಲೇ ವಿನಮ್ರರಾಗಿ ಪ್ರತಿಕ್ರಿಯಿಸಿದ ಅವರು, ''ಕ್ಷಮಿಸಿ ಮೇಡಂ, ನಿಮ್ಮ ದೇಶದಲ್ಲಿಒಬ್ಬ ವ್ಯಕ್ತಿಯನ್ನು ಸಂಭಾವಿತನನ್ನಾಗಿಸಲು ದರ್ಜಿ ಬೇಕು. ಆದರೆ ನನ್ನ ದೇಶದಲ್ಲಿವ್ಯಕ್ತಿತ್ವವೊಂದೇ ಸಂಭಾವಿತನನ್ನು ನಿರ್ಧರಿಸುತ್ತದೆ,'' ಎಂದರು.

ಇಂಗ್ಲೆಂಡಿನಲ್ಲಿವಿವೇಕಾನಂದರನ್ನು ಭೇಟಿಯಾದ ಮಾರ್ಗರೆಟ್‌ ನೋಬಲ್‌ ಎಂಬ ಯುವತಿ ಸನಾತನ ಧರ್ಮದ ಸೆಳೆತಕ್ಕೆ ಸಿಕ್ಕಿ ವಿವೇಕರ ಶಿಷ್ಯೆಯಾಗಿ ನಿವೇದಿತಾ ಎಂಬ ಭಾರತೀಯ ಹೆಸರಿಟ್ಟುಕೊಂಡು ಸಿಸ್ಟರ್‌ ನಿವೇದಿತಾ ಎಂಬ ಹೆಸರಿನಲ್ಲಿಭಾರತೀಯಳೇ ಆಗಿಹೋದರು. ಫ್ರಾನ್ಸ್‌ನ ಖ್ಯಾತ ನಟಿಯಾದ ಸಾರಾ ಬರ್ಮಹಾರ್ಡಿಟ್‌ 1896ರಲ್ಲಿಸ್ವಾಮಿ ವಿವೇಕಾನಂದರ ತತ್ವ ಸಿದ್ಧಾಂತಗಳಿಂದ ಪ್ರೇರಣೆಗೊಂಡು ಪಾಶ್ಚಾತ್ಯ ದೇಶಗಳಲ್ಲಿಭಾರತೀಯ ತತ್ವಶಾಸ್ತ್ರ ಮತ್ತು ವೇದಾಂತವನ್ನು ಪರಿಚಯಿಸುವಲ್ಲಿಆಸಕ್ತಿ ಹೊಂದಿದರು. ಸುಭಾಷ್‌ಚಂದ್ರ ಬೋಸ್‌, ಅರವಿಂದೋ ಘೋಷ್‌, ಭಾಘ್‌ ಜತಿನ್‌, ಮಹಾತ್ಮ ಗಾಂಧಿ, ರವಿಂದ್ರನಾಥ ಠಾಗೋರ್‌, ಚಕ್ರವರ್ತಿ ರಾಜಗೋಪಾಲಾಚಾರಿ, ಜವಾಹರಲಾಲ್‌ ನೆಹರು, ಬಾಲ ಗಂಗಾಧರ ತಿಲಕ್‌, ಜಗದೀಶ್‌ ಚಂದ್ರ ಬೋಸ್‌, ಆಯನಿ ಬೆಸಂಟ್‌, ರೊಮಿನ್‌ ರೊಲಾಂಡ್‌ ಸೇರಿದಂತೆ ವಿಶ್ವಾದ್ಯಂತ ವಿವೇಕಾನಂದರ ಪ್ರಭಾವಕ್ಕೆ ಒಳಗಾದ ಗಣ್ಯರ ಪಟ್ಟಿಯಲ್ಲಿದ್ದಾರೆ.

ಇತರೆ ಸುದ್ದಿಗಳು

ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ, ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ

Views : 1628+

ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ ?

Views : 1858+

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು

Views : 4321+

ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ 6 ಬಂಪರ್ ಘೋಷಣೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ!

Views : 4499+

ಮೊನಾಲಿಸಾ ಪ್ರಬುದ್ಧಳಾಗಿದ್ದಾಳೆ – ಪತಿಗೆ ಟ್ರಾನ್ಸಿಟ್ ಬೇಲ್‌ ಮಂಜೂರು ಮಾಡಿದ ಕೇರಳ ಹೈಕೋರ್ಟ್

Views : 4520+

ನೂತನ ಸಿಎಂಗೆ ಇಚ್ಛಾಶಕ್ತಿ ಕೊರತೆ ಇದೆ: ಸಿ.ಟಿ.ರವಿ

Views : 4599+

ದೇಶದ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ ಡಿಕೆಶಿ

Views : 7078+

ಇರಾನ್ ಮೇಲೆ ಅಮೆರಿಕ ವಾಯುದಾಳಿ! ರಕ್ಷಣಾತ್ಮಕ ದಾಳಿಗೆ ನಿಯಂತ್ರಣ ಕೇಂದ್ರ ಉಡೀಸ್ ...

Views : 7559+

ದಾವಣಗೆರೆಯ ಕೆ ಟಿ ಜಿ ನಗರ ಅವ್ಯವಸೆಯ ಆಗರ ! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

Views : 7597+

ಡಿ.ಕೆ.ಶಿವಕುಮಾರ್ ಅವರಿಂದ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್

Views : 12792+

ಸಂಪುಟ ರಚನೆಗೆ ಕ್ಷಣಗಣನೆ. ಡಿಕೆಶಿ, ಸಿದ್ದು ದೆಹಲಿಗೆ...

Views : 12916+

ಸತತ 2ನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ RCB...

Views : 13191+

ಹಿಮಾಚಲದಲ್ಲಿ ಭಯಾನಕ ಅಪಘಾತ! ಪ್ರಪಾತಕ್ಕೆ ಬಿದ್ದ ಕಾರ್ ....

Views : 13212+

ರಾಜ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್​​...! ಮುಂದಿನ ಸಿ ಎಂ ಯಾರು ?

Views : 27180+

ಚಾಮುಂಡಿ ತಾಯಿ ಮುಂದೆ ಕ್ಷಮೆ ಬೇಡಿದ ರಣ್ವೀರ್ ಸಿಂಗ್...

Views : 30218+

ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

Views : 30238+

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ: ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್...

Views : 30267+

ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ , ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

Views : 33271+

ಟ್ರಂಪ್ ಪುತ್ರಿ ಇವಾಂಕಾ ಹತ್ಯೆಗೆ ಸಂಚು...!

Views : 33276+

ವಾಹನ ಸವಾರರಿಗೆ ಬಿಗ್ ಶಾಕ್ ! ಸತತ 4ನೇ ಭಾರಿ ತೈಲ ಬೆಲೆ ಏರಿಕೆ ...

Views : 33398+

ಬಿಗ್ ಬಾಸ್ ಸ್ಪರ್ದಿ ನಿರೂಪಕಿ ಜಾಹ್ನವಿ ಜೆಡಿಎಸ್ ಗೆ ಸೇರ್ಪಡೆ ...!

Views : 33492+

ಗಂಡನ ಪ್ರಾಣ ತೆಗೆದ ಹೆಂಡತಿಯ ಕಳ್ಳಾಟ ಬಯಲು ....! ಅನೈತಿಕ ಸಂಬಂಧಕ್ಕೆ ಗಂಡ ಬಲಿ

Views : 33523+

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ! ಹತ್ತು ದಿನದಲ್ಲಿ 3 ನೇ ಭಾರಿ ಏರಿಕೆ

Views : 39069+

ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮಾನವ ಸರಪಳಿ ಪ್ರತಿಭಟನೆಗೆ ಪೊಲೀಸರ ಬ್ರೇಕ್!

Views : 39158+