ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಹನುಮ ಜಯಂತಿ ಯಾವಾಗ ಆಚರಿಸಬೇಕು ? ಗೊಂದಲಕ್ಕೆ ಇಲ್ಲಿದೆ ಉತ್ತರ ...
ವರದಿಗಾರರು : shobha jagadish | ಸ್ಥಳ : ಬೆಂಗಳೂರು | ದಿನಾಂಕ : 31-03-2026

ಹನುಮ ಜಯಂತಿ ಯಾವಾಗ ಆಚರಿಸಬೇಕು ? ಗೊಂದಲಕ್ಕೆ ಇಲ್ಲಿದೆ ಉತ್ತರ ...

ಹನುಮ ಜಯಂತಿ ಯಾವಾಗ ಎನ್ನುವ ಗೊಂದಲ ನಿಮಗೆ ಇದ್ದೀಯಾ ? ಭಾರತೀಯ ಸಂಸ್ಕೃತಿಯಲ್ಲಿ ಹನುಮ ಜಯಂತಿಯು ಕೇವಲ ಒಂದು ಹಬ್ಬವಲ್ಲ ಅದು ಅಚಲ ಭಕ್ತಿ ಮತ್ತು ಅಪ್ರತಿಮ ಸಾಹಸದ ಸಂಕೇತ. ಹನುಮಂತನನ್ನು ಭಕ್ತಿ, ಶಕ್ತಿ, ಧೈರ್ಯ ಮತ್ತು ಕರ್ಮ ಜ್ಞಾನದ ಮೂರ್ತರೂಪವೆಂದು ಪೂಜಿಸಲಾಗುತ್ತದೆ. ವಾಯುದೇವನ ಮಗನಾದ್ದರಿಂದ ಅವನನ್ನು ಮಾರುತಿ, ಆಂಜನೇಯ ಮತ್ತು ಪವನಸುತ ಎಂಬ ದಿವ್ಯ ನಾಮಗಳಿಂದ ಕರೆಯಲಾಗುತ್ತದೆ. ಹನುಮಾನ್ ಜಯಂತಿ ಏಪ್ರಿಲ್ 1 ಅಥವಾ 2 ಯಾವಾಗ ಎಂಬ ಗೊಂದಲ ಸಾಕಷ್ಟು ಜನರಲ್ಲಿದೆ. ಭಾರತೀಯ ಸಂಸ್ಕೃತಿಯಲ್ಲಿ ಹನುಮ ಜಯಂತಿಯು ಕೇವಲ ಒಂದು ಹಬ್ಬವಲ್ಲ, ಅದು ಅಚಲ ಭಕ್ತಿ ಮತ್ತು ಅಪ್ರತಿಮ ಸಾಹಸದ ಸಂಕೇತ. ಹನುಮಂತನನ್ನು ಭಕ್ತಿ, ಶಕ್ತಿ, ಧೈರ್ಯ ಮತ್ತು ಕರ್ಮ ಜ್ಞಾನದ ಮೂರ್ತರೂಪವೆಂದು ಪೂಜಿಸಲಾಗುತ್ತದೆ. ವಾಯುದೇವನ ಮಗನಾದ್ದರಿಂದ ಅವನನ್ನು ಮಾರುತಿ, ಆಂಜನೇಯ ಮತ್ತು ಪವನಸುತ ಎಂಬ ದಿವ್ಯ ನಾಮಗಳಿಂದ ಕರೆಯಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚೈತ್ರ ಮಾಸದ ಹುಣ್ಣಿಮೆ ತಿಥಿಯು ಏಪ್ರಿಲ್ 1 ರ ಬೆಳಗ್ಗೆ7.06 ರಿಂದ ಶುರುವಾಗಿ ಏಪ್ರಿಲ್ 2 ರ ಬೆಳಗ್ಗೆ 7. 41ಕ್ಕೆ ಕೊನೆಗೊಳ್ಳುವುದು. ಆದ್ದರಿಂದ ಈ ಪವಿತ್ರ ಹಬ್ಬವನ್ನು ಏಪ್ರಿಲ್ 2 ರಂದು ಭಕ್ತಿ ಸಡಗರದಿಂದ ಆಚರಿಸಲಾಗುತ್ತಿದೆ. ಹನುಮಂತನ ಜನ್ಮದ ಹಿಂದೆ ಒಂದು ರೋಚಕ ಕಥೆಯಿದೆ. ಅಂಜನಾದೇವಿ ಮತ್ತು ಕೇಸರಿ ದಂಪತಿಗಳು ಪುತ್ರ ಸಂತಾನಕ್ಕಾಗಿ ಶಿವನನ್ನು ಕುರಿತು ಕಠಿಣ ತಪಸ್ಸು ಮಾಡುತ್ತಾರೆ. ಅಂಜನಾದೇವಿಯ ಭಕ್ತಿಗೆ ಮೆಚ್ಚಿದ ಪರಶಿವನು ತನ್ನ ಅಂಶವನ್ನೇ ಮಗನಾಗಿ ನೀಡಲು ಅನುಗ್ರಹಿಸುತ್ತಾನೆ. ವಾಯುದೇವನು ಶಿವನ ದಿವ್ಯ ಶಕ್ತಿಯನ್ನು ಹೊತ್ತು ತಂದು ಅಂಜನಾದೇವಿಗೆ ತಲುಪಿಸಿದ ಕಾರಣ, ಹನುಮಂತನು ವಾಯುಪುತ್ರನಾಗಿ ಜನಿಸುತ್ತಾನೆ. ಈ ದಿನವನ್ನು ನಾವು ಹನುಮ ಜಯಂತಿಯನ್ನಾಗಿ ಆಚರಿಸಿ, ಆ ಮಹಾಶಕ್ತಿಯನ್ನು ಸ್ಮರಿಸುತ್ತೇವೆ.

ಇತರೆ ಸುದ್ದಿಗಳು

ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ, ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ

Views : 1719+

ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ ?

Views : 1949+

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು

Views : 4412+

ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ 6 ಬಂಪರ್ ಘೋಷಣೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ!

Views : 4590+

ಮೊನಾಲಿಸಾ ಪ್ರಬುದ್ಧಳಾಗಿದ್ದಾಳೆ – ಪತಿಗೆ ಟ್ರಾನ್ಸಿಟ್ ಬೇಲ್‌ ಮಂಜೂರು ಮಾಡಿದ ಕೇರಳ ಹೈಕೋರ್ಟ್

Views : 4611+

ನೂತನ ಸಿಎಂಗೆ ಇಚ್ಛಾಶಕ್ತಿ ಕೊರತೆ ಇದೆ: ಸಿ.ಟಿ.ರವಿ

Views : 4690+

ದೇಶದ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ ಡಿಕೆಶಿ

Views : 7169+

ಇರಾನ್ ಮೇಲೆ ಅಮೆರಿಕ ವಾಯುದಾಳಿ! ರಕ್ಷಣಾತ್ಮಕ ದಾಳಿಗೆ ನಿಯಂತ್ರಣ ಕೇಂದ್ರ ಉಡೀಸ್ ...

Views : 7650+

ದಾವಣಗೆರೆಯ ಕೆ ಟಿ ಜಿ ನಗರ ಅವ್ಯವಸೆಯ ಆಗರ ! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

Views : 7688+

ಡಿ.ಕೆ.ಶಿವಕುಮಾರ್ ಅವರಿಂದ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್

Views : 12883+

ಸಂಪುಟ ರಚನೆಗೆ ಕ್ಷಣಗಣನೆ. ಡಿಕೆಶಿ, ಸಿದ್ದು ದೆಹಲಿಗೆ...

Views : 13007+

ಸತತ 2ನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ RCB...

Views : 13282+

ಹಿಮಾಚಲದಲ್ಲಿ ಭಯಾನಕ ಅಪಘಾತ! ಪ್ರಪಾತಕ್ಕೆ ಬಿದ್ದ ಕಾರ್ ....

Views : 13303+

ರಾಜ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್​​...! ಮುಂದಿನ ಸಿ ಎಂ ಯಾರು ?

Views : 27271+

ಚಾಮುಂಡಿ ತಾಯಿ ಮುಂದೆ ಕ್ಷಮೆ ಬೇಡಿದ ರಣ್ವೀರ್ ಸಿಂಗ್...

Views : 30309+

ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

Views : 30329+

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ: ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್...

Views : 30358+

ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ , ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

Views : 33362+

ಟ್ರಂಪ್ ಪುತ್ರಿ ಇವಾಂಕಾ ಹತ್ಯೆಗೆ ಸಂಚು...!

Views : 33367+

ವಾಹನ ಸವಾರರಿಗೆ ಬಿಗ್ ಶಾಕ್ ! ಸತತ 4ನೇ ಭಾರಿ ತೈಲ ಬೆಲೆ ಏರಿಕೆ ...

Views : 33489+

ಬಿಗ್ ಬಾಸ್ ಸ್ಪರ್ದಿ ನಿರೂಪಕಿ ಜಾಹ್ನವಿ ಜೆಡಿಎಸ್ ಗೆ ಸೇರ್ಪಡೆ ...!

Views : 33582+

ಗಂಡನ ಪ್ರಾಣ ತೆಗೆದ ಹೆಂಡತಿಯ ಕಳ್ಳಾಟ ಬಯಲು ....! ಅನೈತಿಕ ಸಂಬಂಧಕ್ಕೆ ಗಂಡ ಬಲಿ

Views : 33613+

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ! ಹತ್ತು ದಿನದಲ್ಲಿ 3 ನೇ ಭಾರಿ ಏರಿಕೆ

Views : 39159+

ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮಾನವ ಸರಪಳಿ ಪ್ರತಿಭಟನೆಗೆ ಪೊಲೀಸರ ಬ್ರೇಕ್!

Views : 39248+