ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಮದ್ಯ ಪ್ರಿಯರಿಗೆ  ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ : ಬೀರ್, ವಿಸ್ಕಿ ದರ ಇಳಿಕೆ
ವರದಿಗಾರರು : SHOBHA JAGADISH | ಸ್ಥಳ : BANGLORE | ದಿನಾಂಕ : 15-05-2026

ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ : ಬೀರ್, ವಿಸ್ಕಿ ದರ ಇಳಿಕೆ

ಬೆಂಗಳೂರು: ಬಿಯರ್ ಪ್ರಿಯರಿಗೆ ಗುಡ್ ನ್ಯೂಸ್! ಕರ್ನಾಟಕದಲ್ಲಿ ಮೈಲ್ಡ್ ಮತ್ತು ಲಾಗರ್ ಬಿಯರ್‌ಗಳ ಬೆಲೆಗಳು ಮೇ 11ರಿಂದ ಜಾರಿಗೆ ಬರುವಂತೆ 20-25 ಶೇಕಡಾ ಇಳಿಕೆಯಾಗಿದೆ. ಅಬಕಾರಿ ಇಲಾಖೆ ಬಿಯರ್ ಮತ್ತು ಸ್ಪಿರಿಟ್ಸ್‌ಗಳಿಗೆ ‘ಆಲ್ಕೊಹಾಲ್ ಇನ್ ಬೇವರೇಜ್’ (AiB) ನೀತಿಯಡಿ ಹೊಸ ದರಪಟ್ಟಿಯನ್ನು ಬಿಡುಗಡೆ ಮಾಡಿದ್ದು, 5 ಶೇಕಡಾ ಆಲ್ಕೊಹಾಲ್ v/v(volume/volume) ಹೊಂದಿರುವ ಬಿಯರ್‌ಗಳ ಗರಿಷ್ಠ ಚಿಲ್ಲರೆ ಬೆಲೆ (MRP) 20 ರಿಂದ 25 ಶೇಕಡಾ ಕಡಿಮೆಯಾಗಿದೆ. ಹೊಸ ದರಪಟ್ಟಿಯ ಪ್ರಕಾರ, 5 ಶೇಕಡಾ ಆಲ್ಕೊಹಾಲ್ v/v ಹೊಂದಿರುವ ಜನಪ್ರಿಯ ಮೈಲ್ಡ್ ಬಿಯರ್ ಬ್ರ್ಯಾಂಡ್‌ಗಳಾದ ಕಿಂಗ್‌ಫಿಷರ್ ಪ್ರೀಮಿಯಂ, ಕಿಂಗ್‌ಫಿಷರ್ ಅಲ್ಟ್ರಾ, ಬಡ್‌ವೈಸರ್, ಯುಬಿ ಎಕ್ಸ್‌ಪೋರ್ಟ್, ಹೈನಿಕನ್ ಮುಂತಾದ 650 ಮಿ.ಲೀ ಬಾಟಲಿಗಳ ಗರಿಷ್ಠ ಚಿಲ್ಲರೆ ದರದಲ್ಲಿ ಕ್ರಮವಾಗಿ 75 ರೂ (KF Premium, Ultra), 70 ರೂ (Heineken), 25 ರೂ (UB Export) ಮತ್ತು 20 ರೂ. (Budweiser Premium) ಇಳಿಕೆಯಾಗಿದೆ. ಪ್ರೀಮಿಯಂ ಸ್ಕಾಚ್ ವಿಸ್ಕಿಗಳ ಬೆಲೆಯಲ್ಲಿಯೂ 20 ಶೇಕಡಾ ಇಳಿಕೆ ಕಂಡುಬಂದಿದೆ. 750 ಮಿ.ಲೀ ಬಾಟಲಿಯ ಬ್ಲಾಕ್ ಲೇಬಲ್ (43 ಶೇಕಡಾ ಆಲ್ಕೊಹಾಲ್ v/v) ಮತ್ತು ಚಿವಾಸ್ ರೀಗಲ್ (40 ಶೇಕಡಾ ಆಲ್ಕೊಹಾಲ್ v/v) ದರವು 5190 ರೂಪಾಯಿಗಳಿಂದ 4100 ರೂಪಾಯಿಗೆ ಇಳಿಕೆಯಾಗಿದೆ. ಹೊಸ ಅಬಕಾರಿ ತೆರಿಗೆ ನೀತಿಯ ಭಾರವು ದೇಶಿ ತಯಾರಿತ ಮದ್ಯ (IML)ದ ಮೊದಲ ಐದು ಅಬಕಾರಿ ಸ್ಲ್ಯಾಬ್‌ಗಳ (ಕಡಿಮೆ ದರದ) ಮೇಲೆ ಹೆಚ್ಚು ಬೀಳಲಿದೆ. ಇವು 180 ಮಿ.ಲೀ (ನಿಪ್) ಟೆಟ್ರಾ ಪ್ಯಾಕ್‌ಗಳಲ್ಲಿ ಮಾರಾಟವಾಗುತ್ತವೆ. ಈ ಸ್ಲ್ಯಾಬ್‌ಗಳ ದರಗಳು 20-25 ಶೇಕಡಾ ಏರಿಕೆಯಾಗಿದೆ. ಇದರಿಂದ ಕಡಿಮೆ ಮತ್ತು ಮಧ್ಯಮ ಆದಾಯದ ಗ್ರಾಹಕರ ಮೇಲೆ AiB ನೀತಿಯ ಪರಿಣಾಮ ಹೆಚ್ಚು ಕಾಣಬಹುದು. ಮೊದಲ ಐದು ಸ್ಲ್ಯಾಬ್‌ಗಳು ಅಬಕಾರಿ ಆದಾಯದ 75 ರಿಂದ 80 ಶೇಕಡಾ ವರೆಗೆ ಕೊಡುಗೆ ನೀಡುತ್ತವೆ. 42.8 ಶೇಕಡಾ ಆಲ್ಕೊಹಾಲ್ v/v ಹೊಂದಿರುವ ಜನಪ್ರಿಯ ರಮ್ ಬ್ರ್ಯಾಂಡ್ ‘ಓಲ್ಡ್ ಮಾಂಕ್’ನ ಹೊಸ ಎಂಆರ್ ಪಿ 765 ರೂಪಾಯಿಗಳಿಂದ 850 ರೂಪಾಯಿಗಳಿಗೆ ಪರಿಷ್ಕರಿಸಲಾಗಿದೆ. ಓಲ್ಡ್ ಮಾಂಕ್ ಐದನೇ ಅಬ್ಕಾರಿ ಸ್ಲ್ಯಾಬ್‌ಗೆ ಸೇರಿದೆ. ಎಲ್ಲಾ ಬ್ರ್ಯಾಂಡ್‌ಗಳ ಅಂತಿಮ ಹೊಸ ಎಂಆರ್ ಪಿ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಮೇ 11ರಿಂದ ಹೊಸ ಎಂಆರ್ ಪಿ ಜಾರಿಗೆ ಬಂದಿದ್ದರೂ ಜನರಿಗೆ ಹೊಸ ದರಗಳ ಬಗ್ಗೆ ಇನ್ನೂ ಸಂಪೂರ್ಣ ಅರಿವು ಇಲ್ಲ. ಮಾರುಕಟ್ಟೆಯ ಪ್ರತಿಕ್ರಿಯೆಯನ್ನು ಕಾದು ನೋಡಬೇಕಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಉದ್ಯಮ ಮೂಲಗಳು ತಿಳಿಸಿವೆ. ಎಐಬಿ ನೀತಿಯು ಆರು ದಶಕ ಹಳೆಯ ‘ಬಲ್ಕ್ ಲೀಟರ್ ಆಲ್ಕೊಹಾಲ್’ ಆಧಾರಿತ ತೆರಿಗೆ ನೀತಿಯನ್ನು ಬದಲಿಸಿದೆ. ರಾಜ್ಯ ಸರ್ಕಾರವು ಮೇ 8ರಂದು ಹೊಸ ತೆರಿಗೆ ನೀತಿಗೆ ಸಂಬಂಧಿಸಿದ ಅಂತಿಮ ಅಧಿಸೂಚನೆಯನ್ನು ಹೊರಡಿಸಿ, ‘ಕರ್ನಾಟಕ ಅಬಕಾರಿ (ಅಬಕಾರಿ ಸುಂಕ ಮತ್ತು ಶುಲ್ಕ) (2ನೇ ತಿದ್ದುಪಡಿ) ನಿಯಮಗಳು, 2026’ ನ್ನು ಪ್ರಕಟಿಸಿತ್ತು. ಇದು ಮೇ 11ರಿಂದ ಜಾರಿಗೆ ಬಂದಿದೆ. ಎಐಬಿ ತೆರಿಗೆ ನೀತಿಯನ್ನು ಜಾರಿಗೆ ತಂದ ಭಾರತದ ಮೊದಲ ರಾಜ್ಯ ಕರ್ನಾಟಕವಾಗಿದೆ. AiB ಎಂದರೆ “ಬ್ರಾಂಡಿ, ವಿಸ್ಕಿ, ಜಿನ್, ರಮ್, ಬಿಯರ್, ವೈನ್, ಫ್ರೂಟ್ ವೈನ್, ಫೋರ್ಟಿಫೈಡ್ ವೈನ್ ಮುಂತಾದ ಮದ್ಯಗಳಲ್ಲಿ ಪ್ರತಿ ಲೀಟರ್‌ಗೆ ಇರುವ ಆಲ್ಕೊಹಾಲ್ ಪ್ರಮಾಣ/ಪರಿಮಾಣ ಎಂದು ಅರ್ಥ. ಇದಲ್ಲದೆ, ಕರ್ನಾಟಕದಲ್ಲಿ ಎಂಆರ್ ಪಿ ಆಧಾರದಲ್ಲಿ ಮದ್ಯ ಮಾರಾಟವಾಗುವ ಅಬಕಾರಿ ಸ್ಲ್ಯಾಬ್‌ಗಳ ಸಂಖ್ಯೆಯನ್ನು ಸರ್ಕಾರವು 16ರಿಂದ 8ಕ್ಕೆ ಇಳಿಸಿದೆ.

ಇತರೆ ಸುದ್ದಿಗಳು

ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ, ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ

Views : 1608+

ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ ?

Views : 1838+

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು

Views : 4301+

ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ 6 ಬಂಪರ್ ಘೋಷಣೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ!

Views : 4479+

ಮೊನಾಲಿಸಾ ಪ್ರಬುದ್ಧಳಾಗಿದ್ದಾಳೆ – ಪತಿಗೆ ಟ್ರಾನ್ಸಿಟ್ ಬೇಲ್‌ ಮಂಜೂರು ಮಾಡಿದ ಕೇರಳ ಹೈಕೋರ್ಟ್

Views : 4500+

ನೂತನ ಸಿಎಂಗೆ ಇಚ್ಛಾಶಕ್ತಿ ಕೊರತೆ ಇದೆ: ಸಿ.ಟಿ.ರವಿ

Views : 4579+

ದೇಶದ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ ಡಿಕೆಶಿ

Views : 7058+

ಇರಾನ್ ಮೇಲೆ ಅಮೆರಿಕ ವಾಯುದಾಳಿ! ರಕ್ಷಣಾತ್ಮಕ ದಾಳಿಗೆ ನಿಯಂತ್ರಣ ಕೇಂದ್ರ ಉಡೀಸ್ ...

Views : 7539+

ದಾವಣಗೆರೆಯ ಕೆ ಟಿ ಜಿ ನಗರ ಅವ್ಯವಸೆಯ ಆಗರ ! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

Views : 7577+

ಡಿ.ಕೆ.ಶಿವಕುಮಾರ್ ಅವರಿಂದ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್

Views : 12772+

ಸಂಪುಟ ರಚನೆಗೆ ಕ್ಷಣಗಣನೆ. ಡಿಕೆಶಿ, ಸಿದ್ದು ದೆಹಲಿಗೆ...

Views : 12896+

ಸತತ 2ನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ RCB...

Views : 13171+

ಹಿಮಾಚಲದಲ್ಲಿ ಭಯಾನಕ ಅಪಘಾತ! ಪ್ರಪಾತಕ್ಕೆ ಬಿದ್ದ ಕಾರ್ ....

Views : 13192+

ರಾಜ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್​​...! ಮುಂದಿನ ಸಿ ಎಂ ಯಾರು ?

Views : 27160+

ಚಾಮುಂಡಿ ತಾಯಿ ಮುಂದೆ ಕ್ಷಮೆ ಬೇಡಿದ ರಣ್ವೀರ್ ಸಿಂಗ್...

Views : 30198+

ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

Views : 30218+

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ: ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್...

Views : 30247+

ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ , ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

Views : 33251+

ಟ್ರಂಪ್ ಪುತ್ರಿ ಇವಾಂಕಾ ಹತ್ಯೆಗೆ ಸಂಚು...!

Views : 33256+

ವಾಹನ ಸವಾರರಿಗೆ ಬಿಗ್ ಶಾಕ್ ! ಸತತ 4ನೇ ಭಾರಿ ತೈಲ ಬೆಲೆ ಏರಿಕೆ ...

Views : 33378+

ಬಿಗ್ ಬಾಸ್ ಸ್ಪರ್ದಿ ನಿರೂಪಕಿ ಜಾಹ್ನವಿ ಜೆಡಿಎಸ್ ಗೆ ಸೇರ್ಪಡೆ ...!

Views : 33472+

ಗಂಡನ ಪ್ರಾಣ ತೆಗೆದ ಹೆಂಡತಿಯ ಕಳ್ಳಾಟ ಬಯಲು ....! ಅನೈತಿಕ ಸಂಬಂಧಕ್ಕೆ ಗಂಡ ಬಲಿ

Views : 33503+

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ! ಹತ್ತು ದಿನದಲ್ಲಿ 3 ನೇ ಭಾರಿ ಏರಿಕೆ

Views : 39048+

ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮಾನವ ಸರಪಳಿ ಪ್ರತಿಭಟನೆಗೆ ಪೊಲೀಸರ ಬ್ರೇಕ್!

Views : 39137+