ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಅನಿಸಿಕೆ ಇದು ನನ್ನ ಮನದಾಳದ ಮಾತು
ವರದಿಗಾರರು : ಧನಂಜಯ ವಿ. | ಸ್ಥಳ : Bengaluru | ದಿನಾಂಕ : 05-12-2025

ಅನಿಸಿಕೆ ಇದು ನನ್ನ ಮನದಾಳದ ಮಾತು

ಇದು ಮಾಹಿತಿ ಯುಗ ! ದಿನದಿಂದ ದಿನಕ್ಕೆ ತಂತ್ರಜ್ಞಾನ ಎಲ್ಲೇ ಮೀರಿ ದಾಪುಗಾಲು ಇಡುತ್ತಿದೆ.

ಸಂವಹನ, ಬಾಹ್ಯಾಕಾಶ ವ್ಯಾಪಾರ ಮತ್ತು ದೈನಂದಿನ ಚಟುವಟಿಕೆಗಳ ಪ್ರಧಾನ ಪಾತ್ರ ಈ ತಂತ್ರಜ್ಞಾನದ್ದು‌. ಒಂದು ಕ್ಷಣ ಈ ತಂತ್ರಜ್ಞಾನ ಗತಿಯಲ್ಲಿ ಏರುಪೇರಾದರು ಇಡಿ ವಿಶ್ವವೇ ದಂಗಾಗಿ ಬಿಡುತ್ತವೆ‌. ಅಷ್ಟರ ಮಟ್ಟಿಗೆ ಈ ತಂತ್ರಜ್ಞಾನ ಮಾನವನ ನಾಡಿ ಮಿಡಿತವನ್ನೇ ನಿಯಂತ್ರಿಸುವಷ್ಟು ಆಗಾಧವಾಗಿ ಬೆಳೆದು ನಿಂತಿವೆ.

ಇತ್ತೀಚೆಗೆ ಎಐ ದಿಗ್ಗಜ ಎಲಾನ್ ಮಸ್ಕ್ ಮತ್ತು ಝರೋಧಾ ಸಂಸ್ಥಾಪಕ ನಿಖಿಲ್ ಕಾಮತ್ ನಡುವಿನ ಸಂದರ್ಶನ ಇಡೀ ವಿಶ್ವ ಸಮುದಾಯವನ್ನೇ ಬೆರಗಾಗಿಸಿದ್ದು ಸುಳ್ಳಲ್ಲ. ಎಲಾನ್ ಮಸ್ಕ್ ಸಂದರ್ಶನದಲ್ಲಿ ಒಂದು ವಿಷಯವನ್ನ ಬಹಿರಂಗಪಡಿಸಿದರು.

ಅದೇನೆಂದರೆ ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಜನರು ಕೆಲಸವೇ ಮಾಡುವ ಅವಶ್ಯಕತೆ ಇಲ್ಲ ಕೆಲಸ ಒಂದು ಐಚ್ಚಿಕ ಕ್ಷೇತ್ರವಾಗಿ ಉಳಿಯಲಿದೆ‌. ಎಐ ರೋಬೋ ತಂತ್ರಜ್ಞಾನಣ್ಣ ಎಲ್ಲ ಕೆಲಸ ಕಾರ್ಯವನ್ನ ನಿರ್ವಹಿಸುತ್ತಾನೆ. ಆತ ಮನುಷ್ಯನಿಗಿಂತ ನೂರು ಪಟ್ಟು ಹೆಚ್ಚು ಬಲಶಾಲಿ ಬುದ್ಧಿಶಾಲಿ‌. ಎಐ ರೋಬೋ ಬಂದ ಮೇಲಂತೂ ಮನುಷ್ಯರು ದುಡಿಮೆ ಮಾಡುವ ಅಗತ್ಯವೇ ಇಲ್ಲ?? ಅರೇ ವಾ...!!! ಎಂತ ಅದ್ಭುತ ಕಲ್ಪನೆಯಲ್ಲವೇ.

ಹಿಂದೊಮ್ಮೆ ನಾವು ರಜನಿಕಾಂತ್ ನಟನೆಯ ರೋಬೋ ಸಿನೆಮಾ ನೋಡಿ. ಖುಷಿ ಪಟದಟಿದ್ದೇವು. ಅದು ಒಂದು ಮನರಂಜನೆ ಸಿನೆಮಾ. ಈಗ ಅದು ಅಕ್ಷರಶಃ ನಿಜ ಸ್ವರೂಪ ತಾಳುವ ಹಂತದಲ್ಲಿದೆ.

ಯಾಕೆ ಈ ತಂತ್ರಜ್ಞಾನದ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳೊದು ಅಂತ ನಿಮಗನಿಸ್ತಿದೆಯಾ? ಹೌದು ಸ್ವಾಮಿ ತಲೆ ಕೆಡಿಸಿಕೊಳ್ಳಲೇ ಬೇಕಾದ ವಿಷಯ ಇದು‌. ಹೇಳಿದ್ದನ್ನು ಮಾಡಿಯೇ ತೀರುವ ಮಾನವನ ಅವತಾರಲ್ಲಿರುವ ರೋಬೋ ಅಂದ್ರೆ ಅವನೆ ಎಲಾನ್ ಮಸ್ಕ್. ಒಂದು ಗಾದೆ ಮಾತಿದೆ ಕೆಲಸವಿಲ್ಲದವನ ತಲೆ ದೆವ್ವದ ಮನೆ.!! ಈ ಗಾದೆ ಮಾತು ಒಂದು ಲೋಕಾರೂಢಿಯ ಮಾತು ಆಗಿತ್ತು. ಇದೀಗ ಆ ಲೋಕಾರೂಢಿಯ ಮಾತು ಲೋಕದ ರೂಢಿಯೊಂದಿಗೆ ಬದಲಾಗುವ ಕಾಲ ಬಂದುಬಿಟ್ಟಿದೆ. ಮಸ್ಕ್ ಈಗಾಗಲೇ ಅಪ್ರತಿಮ ಸಾಧನೆಗಳನ್ನ ಮಾಡಿಬಿಟ್ಟಿದ್ದಾನೆ. ಭೂಮಿಯಿಂದ ಜಿಗಿದ ರಾಕೇಟ್ ಪುನಃ ಭೂಮಿಗೆ ತಂದು ಇಳಿಸಿದ ಭೂಪ ಈತ.

ಭೂಮಂಡಲದಿಂದ ಜನರನ್ನು ಮಂಗಳ ಗ್ರಹಕ್ಕೆ ಕಳುಹಿಸುವ ಮಾಂತ್ರಿಕನೀತ‌. ಇವೆಲ್ಲ ಸರಿ ಸ್ವಾಮಿ.‌‌..ಆದ್ರೆ ನಮ್ಮಂತ ಜನಸಾಮಾನ್ಯರ ಪಾಡೇನು ?

ಅಲ್ವ..ನಾವು ದುಡಿದು ತಿಂಗಳ ಸಂಬಳಕ್ಕೆ ಕಾಯುತ್ತಿರುವ ಮಂದಿ. ಅದನ್ನೆಲ್ಲ ತಂತ್ರಜ್ಞಾನ ನುಂಗಿಬಿಟ್ಟರೆ ನಮ್ ಗತಿ ಏನು ಸ್ವಾಮಿ. ...

ವಿಜ್ಞಾನ ತಂತ್ರಜ್ಞಾನ ಅಭಿವೃದ್ಧಿ ಎಲ್ಲ ಓಕೆ. ಈಗಾಗಲೇ ಬಂದಿರುವ ಸಾಕಷ್ಟು ತಂತ್ರಾಂಶಗಳು ಜನರನ್ನ ನಿರುದ್ಯೋಗಿಗಳನ್ನಾಗಿ ಮಾರ್ಪಡಿಸಿವೆ‌. .

ನಾವು ಶಾಲೆಯಲ್ಲಿ ಓದುವಾಗ ನಮ್ಮ ಕೈಬರಹ ದುಂಡಾಗಿರಲಿ ಅಂತ ಅದೆಷ್ಟೋ ಬಾರಿ ಶಿಕ್ಷಕರಿಂದ ಬೈಗುಳ ,ಪೆಟ್ಟು ತಿಂದಿದ್ದಿದೆ. ಆದರೆ ಇಂದು ಕೈಬರಹಕ್ಕೆ ಕವಡೆಕಾಸು ಕಿಮ್ನತ್ತಿಲ್ಲ‌ ಎಲ್ಕವೂ ಗಣಕಯಂತ್ರ ನುಂಗಿಬಿಟ್ಟಿದೆ. ಇದೇ ರೀತಿ ಮುಂದೆ ರೋಬೋ ಮಹಾಶಯನ ಎಂಟ್ರಿಯಿಂದ ಕಥೆ ಏನು?? ಮನುಷ್ಯ ಮನುಷ್ಯನ ನಡುವೆ ಭಾವನೆಗಳ ಸಂಬಂಧ ಸೇತು ಕುಸಿಯತೊಡಗಿವೆ‌. ಅತ್ಯಧಿಕ ಜನಸಂಖ್ಯೆ ಇರುವಂತ ನಮ್ಮ ದೇಶದಲ್ಲಿ ಕ್ಷಿಪ್ರ ಬೆಳವಣಿಗೆ ಕಾಣುತ್ತಿರುವ ತಂತ್ರಜ್ಞಾನದಿಂದ ಸಂಭವಿಸಬಹುದಾದ ಅನಾಹುತಗಳೇನು? ತಂತ್ರಜ್ಞಾನ ಬೇಡವೇ ಬೇಡ ಅಂತ ನನ್ನ ಅನಿಸಿಕೆಯಲ್ಲ. ಆದರೆ ಅದರಿಂದ ಮನುಕುಲ ನಶಿಸಿಹೋಗಬಾರದೆಂಬುದು ನನ್ನ ಕಳವಳ. ತಂತ್ರಜ್ಞಾನದ ಸುಳಿಯಲ್ಲಿ ಮಾನವನ ಅಸ್ತಿತ್ವವೇ ಅಳಿದುಹೋಗಬಾರದಲ್ಕವೇ.. ನೀವು ಏಂತೀರಿ????

ಇತರೆ ಸುದ್ದಿಗಳು

ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ, ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ

Views : 1608+

ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ ?

Views : 1838+

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು

Views : 4301+

ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ 6 ಬಂಪರ್ ಘೋಷಣೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ!

Views : 4479+

ಮೊನಾಲಿಸಾ ಪ್ರಬುದ್ಧಳಾಗಿದ್ದಾಳೆ – ಪತಿಗೆ ಟ್ರಾನ್ಸಿಟ್ ಬೇಲ್‌ ಮಂಜೂರು ಮಾಡಿದ ಕೇರಳ ಹೈಕೋರ್ಟ್

Views : 4500+

ನೂತನ ಸಿಎಂಗೆ ಇಚ್ಛಾಶಕ್ತಿ ಕೊರತೆ ಇದೆ: ಸಿ.ಟಿ.ರವಿ

Views : 4579+

ದೇಶದ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ ಡಿಕೆಶಿ

Views : 7058+

ಇರಾನ್ ಮೇಲೆ ಅಮೆರಿಕ ವಾಯುದಾಳಿ! ರಕ್ಷಣಾತ್ಮಕ ದಾಳಿಗೆ ನಿಯಂತ್ರಣ ಕೇಂದ್ರ ಉಡೀಸ್ ...

Views : 7539+

ದಾವಣಗೆರೆಯ ಕೆ ಟಿ ಜಿ ನಗರ ಅವ್ಯವಸೆಯ ಆಗರ ! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

Views : 7577+

ಡಿ.ಕೆ.ಶಿವಕುಮಾರ್ ಅವರಿಂದ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್

Views : 12772+

ಸಂಪುಟ ರಚನೆಗೆ ಕ್ಷಣಗಣನೆ. ಡಿಕೆಶಿ, ಸಿದ್ದು ದೆಹಲಿಗೆ...

Views : 12896+

ಸತತ 2ನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ RCB...

Views : 13171+

ಹಿಮಾಚಲದಲ್ಲಿ ಭಯಾನಕ ಅಪಘಾತ! ಪ್ರಪಾತಕ್ಕೆ ಬಿದ್ದ ಕಾರ್ ....

Views : 13192+

ರಾಜ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್​​...! ಮುಂದಿನ ಸಿ ಎಂ ಯಾರು ?

Views : 27160+

ಚಾಮುಂಡಿ ತಾಯಿ ಮುಂದೆ ಕ್ಷಮೆ ಬೇಡಿದ ರಣ್ವೀರ್ ಸಿಂಗ್...

Views : 30198+

ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

Views : 30218+

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ: ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್...

Views : 30247+

ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ , ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

Views : 33251+

ಟ್ರಂಪ್ ಪುತ್ರಿ ಇವಾಂಕಾ ಹತ್ಯೆಗೆ ಸಂಚು...!

Views : 33256+

ವಾಹನ ಸವಾರರಿಗೆ ಬಿಗ್ ಶಾಕ್ ! ಸತತ 4ನೇ ಭಾರಿ ತೈಲ ಬೆಲೆ ಏರಿಕೆ ...

Views : 33378+

ಬಿಗ್ ಬಾಸ್ ಸ್ಪರ್ದಿ ನಿರೂಪಕಿ ಜಾಹ್ನವಿ ಜೆಡಿಎಸ್ ಗೆ ಸೇರ್ಪಡೆ ...!

Views : 33472+

ಗಂಡನ ಪ್ರಾಣ ತೆಗೆದ ಹೆಂಡತಿಯ ಕಳ್ಳಾಟ ಬಯಲು ....! ಅನೈತಿಕ ಸಂಬಂಧಕ್ಕೆ ಗಂಡ ಬಲಿ

Views : 33503+

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ! ಹತ್ತು ದಿನದಲ್ಲಿ 3 ನೇ ಭಾರಿ ಏರಿಕೆ

Views : 39049+

ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮಾನವ ಸರಪಳಿ ಪ್ರತಿಭಟನೆಗೆ ಪೊಲೀಸರ ಬ್ರೇಕ್!

Views : 39138+