ಕುಂಭಮೇಳ ಫೇಮಸ್ ಮೊನಾಲಿಸಾ ಅಪ್ರಾಪ್ತೆಯಂತೆ ? ಗಂಡನ ಮೇಲೆ ಎಫ್‌ಐಆರ್
ನವದೆಹಲಿ : ಕುಂಭಮೇಳದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಎಂಬ ಯುವತಿಯ ಅಂತರ್ಧರ್ಮೀಯ ವಿವಾಹ ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಆಕೆ ಮೂಲತಃ ಅಪ್ರಾಪ್ತೆ ಎಂಬುದು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ತನಿಖೆಯಿಂದ ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಆಕೆಯ ಪತಿ ಫರ್ಮನ್ ಖಾನ್ ವಿರುದ್ಧ ಮಧ್ಯಪ್ರದೇಶದ ಮಹೇಶ್ವರ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ. ಕುಂಭಮೇಳ ಸಂಧರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋರಾತ್ರಿ ಸೆನ್ಸೇಷನ್ ಸೃಷ್ಟಿಸಿ ಸುದ್ದಿಯಾಗಿದ್ದ ಕುಂಭಮೇಳದ ಹುಡುಗಿ ಮೊನಾಲಿಸಾ ಇದೀಗ ಮದುವೆ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಅಂತರ್ಧರ್ಮ ವಿವಾಹದ ಮೂಲಕ ಗಮನ ಸೆಳೆದಿದ್ದ ಮೊನಾಲಿಸಾ ಮೂಲತಃ ಅಪ್ರಾಪ್ತೆ ಎಂಬ ಆಘಾತಕಾರಿ ವಿಷಯ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಆಕೆಯ ಪತಿ ಫರ್ಮನ್ ಖಾನ್ ವಿರುದ್ಧ ಗಂಭೀರ ಕಾನೂನು ಕ್ರಮ ಜರುಗಿಸಲಾಗಿದೆ.ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ನಡೆಸಿದ ವಿವರವಾದ ತನಿಖೆಯ ನಂತರ, ಮೊನಾಲಿಸಾ ಮದುವೆಯ ಸಮಯದಲ್ಲಿ ಅಪ್ರಾಪ್ತೆಯಾಗಿದ್ದರು ಎಂಬುದು ದೃಢಪಟ್ಟಿದೆ. ಇದರ ಬೆನ್ನಲ್ಲೇ, ಮಧ್ಯಪ್ರದೇಶದ ಖಾರ್ಗೋನೆ ಜಿಲ್ಲೆಯ ಮಹೇಶ್ವರ್ ಪೊಲೀಸ್ ಠಾಣೆಯಲ್ಲಿ ಫರ್ಮನ್ ಖಾನ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.