ಪರಮಾಣು ಶಸ್ತ್ರಾಸ್ತ್ರ ತ್ಯಾಗಕ್ಕೆ ಇರಾನ್ ಒಪ್ಪಿದೆ : ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್ : ಮಧ್ಯಪ್ರಾಚ್ಯ ಯುದ್ಧದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಿನಕ್ಕೊಂದು ಹೇಳಿಕೆ ಕೊಡುವುದನ್ನು ಮುಂದುವರಿಸಿದ್ದು, ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದದಿರಲು ಒಪ್ಪಿಕೊಂಡಿದೆ. ಜೊತೆಗೆ, ಹೋರ್ಮುಜ್ ಜಲಸಂಧಿಗೆ ಸಂಬಂಧಿಸಿದ ವಿಶೇಷ ಉಡುಗೊರೆಯನ್ನು ಕಳುಹಿಸಿದೆ ಎಂದು ಮಂಗಳವಾರ ಹೇಳಿದ್ದಾರೆ. ಆದರೆ ಅದ್ಯಾವ ಉಡುಗೊರೆ ಎಂಬ ಗುಟ್ಟನ್ನು ಅವರು ಬಿಟ್ಟುಕೊಟ್ಟಿಲ್ಲ. ಮಧ್ಯಪ್ರಾಚ್ಯ ಯುದ್ಧದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಿನಕ್ಕೊಂದು ಹೇಳಿಕೆ ಕೊಡುವುದನ್ನು ಮುಂದುವರಿಸಿದ್ದು, ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದದಿರಲು ಒಪ್ಪಿಕೊಂಡಿದೆ. ಹೋರ್ಮುಜ್ ಜಲಸಂಧಿಗೆ ಸಂಬಂಧಿಸಿದ ವಿಶೇಷ ಉಡುಗೊರೆಯನ್ನು ಕಳುಹಿಸಿದೆ ಓವಲ್ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಇರಾನ್ ತಾನು ಎಂದಿಗೂ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದುವುದಿಲ್ಲ ಎಂದು ಒಪ್ಪಿಕೊಂಡಿದೆ. ಅದು ನಿನ್ನೆ ಅದ್ಭುತವಾದ ಕೆಲಸ ಮಾಡಿದೆ. ಅಲ್ಲಿನ ನಾಯಕತ್ವವು ಅಮೆರಿಕಕ್ಕೆ ಹೋರ್ಮುಜ್ ಜಲಸಂಧಿ ಮತ್ತು ತೈಲ ಹರಿವಿಗೆ ಸಂಬಂಧಿಸಿದ ಮಹತ್ವದ ಉಡುಗೊರೆಯನ್ನು ಕಳಿಸಿಕೊಟ್ಟಿದೆ. ಅದು ಅಪಾರ ಹಣದ ಮೌಲ್ಯವುಳ್ಳ ಬಹಳ ದೊಡ್ಡ ಉಡುಗೊರೆ. ಆದರೆ ಅದು ಏನು ಎಂದು ನಾನು ನಿಮಗೆ ಹೇಳುವುದಿಲ್ಲ, ಅದು ಅಣ್ವಸ್ತ್ರಕ್ಕೆ ಸಂಬಂಧಿಸಿದ್ದಲ್ಲ. ತೈಲ ಹಾಗೂ ಅನಿಲಕ್ಕೆ ಸಂಬಂಧಿಸಿದ್ದು. ಅದು ಬಹಳ ಮಹತ್ವದ್ದು’ ಎಂದು ಮೆಚ್ಚುಗೆ ಸೂಚಿಸಿದರು. ‘ಇರಾನ್ ಒಪ್ಪಂದ ಮಾಡಿಕೊಳ್ಳಲು ಉತ್ಸುಕವಾಗಿದೆ. ಅಮೆರಿಕ ಉಪಾಧ್ಯಕ್ಷ ಜೆ. ಡಿ. ವ್ಯಾನ್ಸ್, ವಿದೇಶಾಂಗ ಸಚಿವ ಮಾರ್ಕೊ ರುಬಿಯೊ, ಮಧ್ಯಪ್ರಾಚ್ಯದ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಮಾತುಕತೆಯ ನೇತೃತ್ವ ವಹಿಸುತ್ತಿದ್ದಾರೆ’ ಎಂದರು.ಇದೇ ವೇಳೆ, ‘ಪ್ರಸ್ತುತ ಇರಾನಿನ ನಾಯಕತ್ವವು ಗಮನಾರ್ಹ ಬದಲಾವಣೆಗಳಿಗೆ ಒಳಗಾಗಿದೆ. ನಮಗೆ ನಿಜವಾಗಿಯೂ ಬೇಕಾಗಿದ್ದು ಇದೇ, ಆಡಳಿತ ಬದಲಾವಣೆ. ನಿಮಗೆ ಗೊತ್ತಾ? ಇದು ಆಡಳಿತದಲ್ಲಿನ ಬದಲಾವಣೆ. ಏಕೆಂದರೆ ಹೊಸ ನಾಯಕರು ಎಲ್ಲಾ ಸಮಸ್ಯೆಗಳಿಗೆ ಕಾರಣರಾದ ಹಳೆಯ ನಾಯಕರಿಗಿಂತ ಬಹಳ ಭಿನ್ನರಾಗಿದ್ದಾರೆ’ ಎಂದರು. ಈ ಮೂಲಕ ಆಡಳಿತ ಬದಲಾವಣೆಯೇ ನಮ್ಮ ಮುಖ್ಯ ಉದ್ದೇಶ, ಅದೀಗ ಸಾಕಾರವಾಗಿದೆ. ಹಾಗಾಗಿ ಯುದ್ಧ ನಿಲ್ಲಬಹುದು ಎಂಬ ಸುಳಿವು ನೀಡಿದ್ದಾರೆ .