ಸಿಂಗಪೊಗು ಸುಬ್ಬು ಲಾಯರ್ ವಿರುದ್ಧ ಕೇಸ್ ದಾಖಲಿಸಿದ ಗಾಯಕಿ ಮಂಗ್ಲಿ ...
ಜನಪ್ರಿಯ ಖ್ಯಾತ ಗಾಯಕಿ ಮಂಗ್ಲಿ ವಿರುದ್ಧ 10 ಕೋಟಿ ರೂಪಾಯಿ ವಂಚನೆ ಆರೋಪ ಕೇಳಿ ಬಂದ ನಂತರ ಅವರು ಲಾಯರ್ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಮಂಗ್ಲಿ ವಿರುದ್ಧ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಅಡ್ವೊಕೇಟ್ ಒಬ್ಬರು ದೌರ್ಜನ್ಯ ಆರೋಪ ಮಾಡಿದ್ದರು. ಈಗ ಮಂಗ್ಲಿ ಅವರೂ ಕೂಡ ದೂರು ನೀಡಿದ್ದು ಪೊಲೀಸರು ಎರಡೂ ಕಡೆಯ ಆರೋಪಗಳನ್ನು ಪರಿಶೀಲಿಸುತ್ತಿದ್ದಾರೆ.
ಜಾನಪದ ಗಾಯಕಿ ಸತ್ಯವತಿ ಮುದಾವತ್ ಅವರು ಮಂಗ್ಲಿ ಎಂದೇ ಪ್ರಸಿದ್ಧ. ಅವರು ಸದ್ಯ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಭಾನುವಾರ ಸಿಂಗಪೊಗು ಸುಬ್ಬು ವಿರುದ್ಧ ದೂರು ನೀಡಿದ್ದು ತನ್ನ ಜೊತೆ ಕೆಟ್ಟದಾಗಿ ವರ್ತಿಸಿದ್ದು 10 ಲಕ್ಷ ಡಿಮ್ಯಾಂಡ್ ಮಾಡಿದ್ದಾನೆ ಎಂದಿದ್ದಾರೆ.ದೂರಿನಲ್ಲಿ ಮಂಗ್ಲಿ ಅವರು, ಮಾರ್ಚ್ 22ರಂದು ಅಡ್ವೊಕೇಟ್ ಆಫೀಸ್ಗೆ ಹೋದಾಗ ಸಿಂಗಪೊಗು ಸುಬ್ಬು ಇತರ ಮೂವರ ಜೊತೆ ಅಲ್ಲಿದ್ದರು. ಅವನು ಅಡ್ವೊಕೇಟ್ ಎಂದು ಕೆಟ್ಟದಾಗಿ ವರ್ತಿಸಲು ಶುರು ಮಾಡಿದ್ದ. ಸುಬ್ಬ 10 ಲಕ್ಷ ತನ್ನಿಂದ ಡಿಮ್ಯಾಂಡ್ ಮಾಡಿದ್ದು, ನನ್ನ ಕುರಿತು ಕೆಟ್ಟದಾಗಿರುವ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಿಂದ ತೆಗೆಯುತ್ತೇನೆ ಎಂದಿದ್ದ ಎಂದು ದೂರಿನಲ್ಲಿ ಮಂಗ್ಲಿ ತಿಳಿಸಿದ್ದಾರೆ.ಹಣವನ್ನು ನೀಡಲು ನಿರಾಕರಿಸಿದಾಗ ಸುಬ್ಬು ಹಾಗೂ ಅವನ ಜೊತೆಗಿದ್ದವರು ಕೆಟ್ಟ ಭಾಷೆಯಲ್ಲಿ ಬೈದು ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅಸಭ್ಯವಾಗಿ ವರ್ತಿಸಿ ಬೆದರಿಸಿ ಹಣವನ್ನು ವಸೂಲಿ ಮಾಡಲು ಪ್ರಯತ್ನಿಸಿದ್ದಾರೆ. ಸುಬ್ಬು ಹಾಗೂ ಅವರ ಸಂಗಡಿಗರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಂಗ್ಲಿ ದೂರಿನಲ್ಲಿ ತಿಳಿಸಿದ್ದಾರೆ.
ಮಂಗ್ಲಿ ಅವರ ವಿರುದ್ಧ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸಿಂಗಪೊಗು ಸುಬ್ಬು ಮಂಗ್ಲಿ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಮೈಕ್ರೋ ಫಿನಾನ್ಸ್ ಹೆಸರಲ್ಲಿ ಮಂಗ್ಲಿ ಹಾಗೂ ಇತರರು ತನಗೆ 10 ಕೋಟಿ ವಂಚಿಸಿದ್ದಾರೆ ಎಂದು ಅಡ್ವೊಕೇಟ್ ದೂರಿನಲ್ಲಿ ಆರೋಪಿಸಿದ್ದಾರೆ.ಗಾಯಕಿ ಮಂಗ್ಲಿ ವಿಚಾರಣೆಯನ್ನು ಪೊಲೀಸರು ಪ್ರಾರಂಭಿಸಿದ್ದಾರೆ. ಈ ವಿವಾದದ ನಂತರ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಬಂದ ಮಂಗ್ಲಿ ಕಣ್ಣೀರು ಹಾಕಿದ್ದಾರೆ .
ಸಂಪೂರ್ಣವಾಗಿ ಸಂಬಂಧವಿಲ್ಲದ ವಿವಾದಕ್ಕೆ ತನ್ನನ್ನು ಎಳೆದು ತರಲಾಗಿದೆ ಎಂದು ಹೇಳಿ ಅವರು ಕಣ್ಣೀರಿಟ್ಟರು. ಇದರಲ್ಲಿ ಅವರು ಭಾಗಿಯಾಗಿರುವುದು ಸಾಬೀತಾದರೆ, ಯಾವುದೇ ಶಿಕ್ಷೆಗೆ ಸಿದ್ಧ. ನಾನು ಕೂಡ ಮಾಧ್ಯಮ ಕುಟುಂಬದಿಂದ ಬಂದವಳು ಎಂದಿದ್ದಾರೆ. ನಾನು ಹಾಡುವ ಲೋಕದಲ್ಲಿ ಬದುಕುತ್ತೇನೆ. ಹಾಡುವುದನ್ನು ಬಿಟ್ಟು ಬೇರೆ ಯಾವುದೇ ವ್ಯವಹಾರ ನನಗೆ ತಿಳಿದಿಲ್ಲ. ನನಗೆ ಬೇರೆ ಯಾವುದೇ ವ್ಯವಹಾರವಿಲ್ಲ. ಹಾಡುವ ಜನರಿಂದ ನನಗೆ ಎಷ್ಟು ಬೆಂಬಲ ಸಿಗುತ್ತದೆ ಎಂದು ನನಗೆ ತಿಳಿದಿದೆ. ಹಾಗಾದರೆ ನಾನು ಬೇರೆ ವ್ಯವಹಾರ ಏಕೆ ಮಾಡಬೇಕು ಎಂದು ಮಂಗ್ಲಿ ಪ್ರಶ್ನಿಸಿದ್ದಾರೆ.