ಕೈಲಾಸಗಿರಿಯ ಮೇಲೆ 2.5 ಕೋಟಿ ವೆಚ್ಚದ ಬೃಹತ್ ತ್ರಿಶೂಲ ಉದ್ಘಾಟನೆ...
ಆಂಧ್ರಪ್ರದೇಶದ ವೈಜಾಗ್‌ನ ಕೈಲಾಸಗಿರಿ ಬೆಟ್ಟದಲ್ಲಿ 65 ಅಡಿ ಎತ್ತರದ ಬೃಹತ್ 'ತ್ರಿಶೂಲ' ಸ್ಥಾಪಿಸಲಾಗಿದೆ. ಇದು ವಿಶಾಖಪಟ್ಟಣಂ ಪ್ರವಾಸೋದ್ಯಮಕ್ಕೆ ಹೊಸ ಆಕರ್ಷಣೆಯಾಗಿದೆ. 2.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ತ್ರಿಶೂಲ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಫೈಬರ್ ಬಲವರ್ಧಿತ ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದೆ. ಇದರ ವಿಶೇಷತೆಯೆಂದರೆ, ವಿಶಾಖಪಟ್ಟಣಂ ನಗರದ ಯಾವುದೇ ಮೂಲೆಯಿಂದ ಕೈಲಾಸಗಿರಿಯತ್ತ ಕಣ್ಣು ಹಾಯಿಸಿದರೂ ಈ ತ್ರಿಶೂಲ ಭವ್ಯವಾಗಿ ಗೋಚರಿಸುತ್ತದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನ ಪ್ರವಾಸೋದ್ಯಮ ಭೂಪಟದಲ್ಲಿ ಕೈಲಾಸಗಿರಿ ಬೆಟ್ಟವು ಈಗಾಗಲೇ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಇದೀಗ ಈ ಪ್ರಸಿದ್ಧ ತಾಣದ ಮುಕುಟಕ್ಕೆ ಮತ್ತೊಂದು ಸುಂದರ ಗರಿ ಸೇರ್ಪಡೆಯಾಗಿದೆ. ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸಲು 65 ಅಡಿ ಎತ್ತರದ ಬೃಹತ್ ಮತ್ತು ಅತ್ಯಾಧುನಿಕ ‘ತ್ರಿಶೂಲ‘ ಕೈಲಾಸಗಿರಿಯ ಮೇಲೆ ತಲೆ ಎತ್ತಿ ನಿಂತಿದೆ. ಶನಿವಾರ ಮೇ 9ವಿಶಾಖಪಟ್ಟಣಂ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕೈಲಾಸಗಿರಿ ಬೆಟ್ಟದ ಮೇಲೆ ಈ ಬೃಹತ್ ತ್ರಿಶೂಲವನ್ನು ಸ್ಥಾಪಿಸಿದೆ. ಶಿವ ಮತ್ತು ಪಾರ್ವತಿಯ ವಿಗ್ರಹಗಳ ಪಕ್ಕದಲ್ಲೇ ನಿರ್ಮಾಣವಾಗಿರುವ ಈ ತ್ರಿಶೂಲವು 65 ಅಡಿ ಎತ್ತರವಿದೆ. ಇದರ ವಿಶೇಷತೆಯೆಂದರೆ, ವಿಶಾಖಪಟ್ಟಣಂ ನಗರದ ಯಾವುದೇ ಮೂಲೆಯಿಂದ ಕೈಲಾಸಗಿರಿಯತ್ತ ಕಣ್ಣು ಹಾಯಿಸಿದರೂ ಈ ತ್ರಿಶೂಲ ಭವ್ಯವಾಗಿ ಗೋಚರಿಸುತ್ತದೆ. ನಡೆಯಲಿರುವ ಅಧಿಕೃತ ಉದ್ಘಾಟನಾ ಸಮಾರಂಭದಲ್ಲಿ ಸಚಿವ ನಾರಾಯಣ್ ಮತ್ತು ವಿಎಂಆರ್‌ಡಿಎ ಅಧ್ಯಕ್ಷ ಪ್ರಣವ್ ಗೋಪಾಲ್ ಭಾಗವಹಿಸಲಿದ್ದು, ವೈಜಾಗ್ ಪ್ರವಾಸಿಗರಿಗೆ ಈ ವಾರಾಂತ್ಯದಿಂದಲೇ ಹೊಸ ಅನುಭವ ಸಿಗಲಿದೆ.