ಬೆಂಗಳೂರು ಕರಗ ಮಹೋತ್ಸವಕ್ಕೆ ಏಪ್ರಿಲ್ 1 ರಂದು ಚಾಲನೆ... !
ಬೆಂಗಳೂರು: ಬೆಂಗಳೂರು ಕರಗ ಉತ್ಸವ 2026 ಪ್ರಾರಂಭವಾಗಿದೆ, ಮೈಸೂರು ದಸರಾ ಶೈಲಿಯ ದೀಪಾಲಂಕಾರದ ನಡುವೆ ದ್ರೌಪದಿ ದೇವಿಯ ದೇವಸ್ಥಾನ,ಕರಗ ಶಕ್ತ್ಯೋತ್ಸವದ ಸುತ್ತಲೂ 20 ಲಕ್ಷ ಭಕ್ತರನ್ನು ನಿರೀಕ್ಷಿಸಲಾಗಿದೆ. ಪೌರ್ಣಿಮೆಯ ಬೆಳದಿಂಗಳಲ್ಲಿ ಹೂವಿನ ದಂಡೆಯನ್ನ ಹೊತ್ತು ಸಾಗುವ ವಿಶ್ವವಿಖ್ಯಾತ ಕರಗವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಕಾತರತೆಯಿಂದ ಕಾಯುತಿದ್ದರು . ಏಪ್ರಿಲ್ 1ರ ಚೈತ್ರ ಪೌರ್ಣಮಿಯ ದಿನ ಕರಗ ಶಕ್ತ್ಯೋತ್ಸವಾಗಿ ನಡೆಯಲಿದೆ. ಈ ಬಾರಿಯೂ ಎ. ಜ್ಞಾನೇಂದ್ರ, ಕರಗ ಹೊರಲಿದ್ದಾರೆ. ಈ ಬಾರಿಯ ಕರಗ ಉತ್ಸವವು ಹಲವು ವಿಶೇಷತೆಗಳಿಂದ ಕೂಡಿದ್ದು, ಮೈಸೂರು ದಸರಾದಂತೆ ಈ ಕರಗದಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಲಾಗುತ್ತದೆ.ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನೀರೀಕ್ಷೆಗಳಿವೆ.