ಮತ್ತೊಂದು ಕೆಎಸ್‌ಆರ್‌ಟಿಸಿ ಬಸ್ ದುರಂತ ! ಬಸ್ ನಲ್ಲಿ ಕಾಣಿಸಿಕೊಂಡ ಬೆಂಕಿ...
ಕೆಎಸ್‌ಆರ್‌ಟಿಸಿ ಬಸ್ಗೆ ಇದ್ದಕ್ಕಿದ್ದ ಹಾಗೇ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಬಸ್ನಲ್ಲಿ ಸುಮಾರು 17 ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ದೇವರಗುಡ್ಡದ ಬಳಿ ಈ ಘಟನೆ ನಡೆದಿದೆ. ಈ ಬಸ್ ಬೆಂಕಿ ಅವಘಡ ಸ್ಥಳೀಯರಲ್ಲಿ ಭಾರೀ ಆತಂಕ ಮೂಡಿಸಿದೆ. ಆದರೆ ಚಾಲಕನ ಸಮಯಪ್ರಜ್ಞೆ ಮತ್ತು ತಾಳ್ಮೆಯಿಂದ ದೊಡ್ಡ ದುರಂತವೇ ತಪ್ಪಿದೆ ಎನ್ನಲಾಗಿದೆ, ಈಗ ಇದು ಎಲ್ಲರ ಚರ್ಚೆಯ ವಿಷಯವಾಗಿದೆ. ಬೆಂಗಳೂರಿನಿಂದ ಗದಗ ಜಿಲ್ಲೆ ಕಡೆ ಹೊರಟ್ಟಿದ್ದ ಕೆಎಸ್ ಆರ್ಟಿಸಿ ಬಸ್ ಈ ಬೆಂಕಿ ದುರಂತಕ್ಕೆ ಒಳಗಾಗಿದೆ. ಬೆಂಕಿ ಹೊತ್ತಿಕೊಂಡ ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಆಗ್ನಿಶಾಮಕದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ, ಆದರೆ ಅಷ್ಟರಲ್ಲಿ ಬಸ್ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಬೆಂಗಳೂರಿನಿಂದ ಗದಗ ಕಡೆಗೆ ಹೊರಟಿದ್ದ ಬಸ್ಗೆ ಬೆಂಕಿ ಹೌದು, ಬೆಂಗಳೂರಿನಿಂದ ಗದಗ ಕಡೆಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ದೇವರಗುಡ್ಡದ ಬಳಿ ತಲುಪುವಷ್ಟರಲ್ಲಿ ಅಚಾನಕ್ ಆಗಿ ಬಸ್‌ನಲ್ಲೇ ಎಲ್ಲೋ ಒಂದು ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್ ಚಲಿಸುತ್ತಿರುವ ಸಂದರ್ಭದಲ್ಲೇ ಈ ಅವಘಡ ಸಂಭವಿಸಿದ್ದರಿಂದ, ಕೆಲ ಕ್ಷಣಗಳ ಕಾಲ ಪ್ರಯಾಣಿಕರು ಭಯಭೀತರಾಗಿದ್ದಾರೆ. ಬೆಂಕಿಯ ದಟ್ಟ ಹೊಗೆ ಬಸ್ ಒಳಗೇ ಕಾಣಿಸಿಕೊಳ್ಳುತ್ತಿದ್ದಂತೆಯೇ ಚಾಲಕನಿಗೆ ವಿಷಯ ತಿಳಿದಿದೆ.