ಗುಡ್ ನ್ಯೂಸ್ : ಮಂಗಳವಾರ ಇಳಿಕೆ ಕಂಡ ಚಿನ್ನ ಹಾಗು ಬೆಳ್ಳಿ ಬೆಲೆ ...
ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಮಂಗಳವಾರ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ . ಚಿನ್ನದ ಬೆಲೆ 40 ರೂ ಇಳಿದರೆ, ಬೆಳ್ಳಿ ಬೆಲೆ 10 ರೂ ಅಗ್ಗಗೊಂಡಿದೆ. 22 ಕ್ಯಾರಟ್ ಚಿನ್ನದ ಬೆಲೆ 13,675 ರೂ ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ 14,918 ರೂ ಇದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ ಗ್ರಾಮ್ಗೆ 255 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 265 ರೂ ಇದೆ.ಚಿನ್ನದ ಬೆಲೆ ಇವತ್ತೂ ಕುಸಿದಿದೆ. ನಿನ್ನೆ ಗ್ರಾಮ್ಗೆ 120 ರೂ ಇಳಿದಿದ್ದ ಬಂಗಾರದ ದರ ಇವತ್ತು ಮಂಗಳವಾರ 40 ರೂ ತಗ್ಗಿದೆ. ಅಪರಂಜಿ ಚಿನ್ನದ ಬೆಲೆ ಮತ್ತೊಮ್ಮೆ 15,000 ರೂ ಒಳಗೆ ಇಳಿದಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಸ್ವರ್ಣ ಬೆಲೆ ಕಡಿಮೆಗೊಂಡಿದೆ. ಬೆಳ್ಳಿ ಬೆಲೆಯಲ್ಲೂ ಇವತ್ತು ಭರ್ಜರಿ ಇಳಿಕೆ ಆಗಿದೆ. ಗ್ರಾಮ್ಗೆ 10 ರೂನಷ್ಟು ಕಡಿಮೆ ಆಗಿದೆ. ಬೆಂಗಳೂರಿನಲ್ಲಿ ಅದರ ಬೆಲೆ 265 ರೂನಿಂದ 255 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,36,750 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,49,180 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,36,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 25,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,500 ರೂ ಇದೆ.