ಹೃದಯಾಘಾತದಿಂದ ಬಿಜೆಪಿ ಮಾಜಿ ಕಾರ್ಯದರ್ಶಿ ಜಗದೀಶ್ ಹಿರೇಮನಿ ನಿಧನ !
ಜಗದೀಶ್ ಹಿರೇಮನಿ ಅವರು ಬಿಜೆಪಿಯ ಮಾಜಿ ಆಗಿದ್ದು,ಹಾಲಿ ಎಸ್ಐಆರ್ ಆಗಿ ಕರ್ತವ್ಯ ನಿರ್ವಹಿಸಿದ್ರು. ರಾಜ್ಯ ಬಿಜೆಪಿ ಪ್ರಬಲ ರಾಜಕಾರಣಿಯನ್ನ ಕಳೆದುಕೊಂಡಿದ್ದು, ತೀವ್ರ ನಷ್ಟ ಉಂಟಾಗಿದೆ . ರಾಜ್ಯ ಬಿಜೆಪಿಯಲ್ಲಿ ಪ್ರಬಲ ನಾಯಕ ಎಂದೇ ಗುರುತಿಸಿಕೊಂಡಿರುವ ಜಗದೀಶ್ ಹಿರೇಮನಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 55 ವರ್ಷದ ಜಗದೀಶ್ ಹಿರೇಮನಿ ಅವರಿಗೆ ಹೃದಯಾಘಾತ ಉಂಟಾಗಿದ್ದು, ನಾಯಕನ ಸಾವಿನ ಸುದ್ದಿ ಕೇಳಿ ಬೆಂಬಲಿಗರು ಆಘಾತಗೊಂಡಿದ್ದಾರೆ. ಇತ್ತ ಸುದ್ದಿ ತಿಳಿದು ಜಗದೀಶ್ ಹಿರೇಮನಿ ಮನೆ ಬಳಿ ಬಿಜೆಪಿ ನಾಯಕರು ತೆರಳಿದ್ದು, ಸಂತಾಪ ಸೂಚಿಸಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ಜಗದೀಶ್ ಹಿರೇಮನಿ ಪಕ್ಷಕ್ಕಾಗಿ ಹಲವು ವರ್ಷಗಳಿಂದ ಶ್ರಮಿಸಿದ್ದಾರೆ. ಇವರ ಕಾರ್ಯ ಗುರುತಿಸಿಯೇ ರಾಜ್ಯ ಬಿಜೆಪಿ ಕಾರ್ಯದರ್ಶಿ ಸ್ಥಾನ ನೀಡಲಾಗಿತ್ತು. ಅನೇಕ ಕಿರಿಯ ನಾಯಕರಿಗೆ ಜಗದೀಶ್ ಹಿರೇಮನಿ ದಾರಿ ತೋರಿದ್ರು. ಸಜ್ಜನ ರಾಜಕಾರಣಿ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ