ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ವೆನಿಜುವೆಲಾ ಪ್ರಕರಣ: ‘ಶಬ್ದಾಸ್ತ್ರ’ ಬಳಕೆಯ ಬಗ್ಗೆ ಎದ್ದ ಅನುಮಾನಗಳು
ವರದಿಗಾರರು : ಮಮತಾ | ಸ್ಥಳ : Bengaluru | ದಿನಾಂಕ : 14-01-2026

ವೆನಿಜುವೆಲಾ ಪ್ರಕರಣ: ‘ಶಬ್ದಾಸ್ತ್ರ’ ಬಳಕೆಯ ಬಗ್ಗೆ ಎದ್ದ ಅನುಮಾನಗಳು

ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಬಂಧನಕ್ಕಾಗಿ ಅಮೆರಿಕ ಇತ್ತೀಚೆಗೆ ನಡೆಸಿದ ಕಾರ್ಯಾಚರಣೆಯ ವೇಳೆ ಅತ್ಯಾಧುನಿಕ ಶಬ್ದಾಸ್ತ್ರವನ್ನು ಬಳಸಲಾಗಿದೆ ಎಂಬ ಅನುಮಾನ ಮೂಡಿದೆ.

ಜ.3ರಂದು ನಡೆದ ಈ ದಾಳಿಯಲ್ಲಿ ಅಮೆರಿಕದ ಸಣ್ಣ ಪಡೆಯು ಸುಧಾರಿತ ತಂತ್ರಜ್ಞಾನದ ಮೂಲಕ ವೆನೆಜುವೆಲಾದ ರೇಡಾರ್ ವ್ಯವಸ್ಥೆಗಳನ್ನು ಸಂಪೂರ್ಣ ಸ್ಥಗಿತಗೊಳಿಸಿತ್ತು ಎಂದೂ ವರದಿಯಾಗಿದೆ. ದಾಳಿ ವೇಳೆ ನಡೆದಿದ್ದೇನು?

- ಏಕಾಏಕಿ ಕಿವಿಗಡಚಿಕ್ಕುವಂಥ ಭಾರೀ ಶಬ್ದ ಕೇಳಿಬಂತು - ತೀವ್ರ ಶಬ್ದ ತರಂಗಗಳಿಂದ ಸೈನಿಕರು ಚದುರಿಹೋದರು - ಸೈನಿಕರ ಮೂಗಿನಿಂದ ರಕ್ತಸ್ರಾವ ಆರಂಭವಾಯಿತು, ಕೆಲವರು ರಕ್ತ ವಾಂತಿ ಮಾಡಿಕೊಂಡರು - ಈ ಅಸ್ತ್ರದಿಂದ ತಲೆ ಸಿಡಿದುಹೋಗುವಂತಹ ಅಸಹನೀಯ ನೋವು - ಈ ನೋವಿಂದ ಯಾರೊಬ್ಬರಿಗೂ ಎದ್ದು ನಿಲ್ಲಲೂ ಸಾಧ್ಯವಾಗಲಿಲ್ಲ

ದಾಳಿ ಪ್ರದೇಶಗಳು ಡ್ರೋನ್‌ನಿಂದ ತುಂಬಿಹೋಗಿದ್ದವು. ಅಲ್ಲದೆ, ಈ ವೇಳೆ ಅಮೆರಿಕದ ಪಡೆಗಳು ವಿಚಿತ್ರವಾದ ತೀವ್ರ ಶಬ್ದ ತರಂಗಗಳನ್ನು ಪ್ರಯೋಗಿಸಿದವು. ಇದರ ಪರಿಣಾಮವಾಗಿ ಅಲ್ಲಿದ್ದ ನೂರಾರು ಸೈನಿಕರು ಚದುರಿಹೋಗುವಂತಾಯಿತು. ಸೈನಿಕರ ಮೂಗಿನಿಂದ ರಕ್ತಸ್ರಾವ ಆರಂಭವಾಗಿದ್ದಲ್ಲದೆ, ಅನೇಕರು ರಕ್ತ ವಾಂತಿ ಮಾಡುತ್ತಾ ನೆಲಕ್ಕೆ ಕುಸಿದು ಬಿದ್ದರು. ಇನ್ನು ತಲೆ ಸಿಡಿದುಹೋಗುವಂತಹ ಅಸಹನೀಯ ನೋವು ಉಂಟಾಗಿ, ಯಾರೊಬ್ಬರಿಗೂ ಎದ್ದು ನಿಲ್ಲಲೂ ಸಾಧ್ಯವಾಗಲಿಲ್ಲ ಎಂಬುದಾಗಿ ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದಾರೆ.

ಇದು ಮೈಕ್ರೋವೇವ್ ಅಥವಾ ಲೇಸರ್ ಆಧಾರಿತ ಡೈರೆಕ್ಟೆಡ್ ಎನರ್ಜಿ ವೆಪನ್ ಇರಬಹುದು ಎಂದು ಶಂಕಿಸಲಾಗಿದೆ. ಈ ದಾಳಿಯಲ್ಲಿ ಸುಮಾರು 100 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ವೆನೆಜುವೆಲಾ ಹೇಳಿದೆ. ಶಬ್ದಾಸ್ತ್ರದಿಂದಲೇ ಈ ಎಲ್ಲ ಸಾವುಗಳೂ ಸಂಭವಿಸಿರಬಹುದೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಅಲ್ಲದೆ, ಈ ಭೀಕರ ದಾಳಿಯಲ್ಲಿ ಶಬ್ದಾಸ್ತ್ರ ಬಳಕೆಯಾಗಿದ್ದು ನಿಜವೇ ಎಂಬ ಪ್ರಶ್ನೆ ಬಗ್ಗೆ ಅಮೆರಿಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಚೀನಾ ಕೂಡ ಈ ಆಯುದ್ಧ ಬಳಸಿತ್ತೇ? ಈ ಹಿಂದೆ 2020ರ ಲಡಾಖ್ ಗಡಿ ಬಿಕ್ಕಟ್ಟಿನ ಸಂದರ್ಭದಲ್ಲಿ ಚೀನಾವು ಭಾರತೀಯ ಸೈನಿಕರ ವಿರುದ್ಧ ಮೈಕ್ರೋವೇವ್ ಆಯುಧವನ್ನು ಪ್ರಯೋಗಿಸಿತ್ತು. ಇದರಿಂದ ಭಾರತೀಯ ಸೈನಿಕರು ಅಸಹನೀಯರಾಗಿ ವಾಂತಿ ಮಾಡಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಆದರೆ ಈ ಆರೋಪ ಸತ್ಯಕ್ಕೆ ದೂರವಾದದ್ದು ಹಾಗೂ ಆಧಾರರಹಿತ ಎಂದು ತಳ್ಳಿಹಾಕಿತ್ತು.

ಅಮೆರಿಕದಿಂದ ಪ್ರತಿಕ್ರಿಯೆಯಿಲ್ಲ ವೆನಿಜುವೆಲಾ ಅಧ್ಯಕ್ಷ ಮಡುರೊ ಬಂಧನಕ್ಕೆಂದು ನಡೆದ ದಾಳಿಯಲ್ಲಿ ನಿಗೂಢ ಶಬ್ದಾಸ್ತ್ರ ಪ್ರಯೋಗಿಸಲಾಗಿದೆ ಎಂದು ವೆನಿಜುವೆಲಾ ಆರೋಪಿಸಿದ್ದು, ಹಲವಾರು ತಜ್ಞರು ಮೈಕ್ರೋವೇವ್ ಅಥವಾ ಲೇಸರ್ ಆಧಾರಿತ ಡೈರೆಕ್ಟೆಡ್ ಎನರ್ಜಿ ವೆಪನ್ ಅನ್ನು ಪ್ರಯೋಗಿಸಿರಬಹುದು ಎಂದು ಶಂಕಿಸಿದ್ದಾರೆ. ಆದರೆ ಇದಕ್ಕೆ ಅಮೆರಿಕ ತಕ್ಷಣ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಏನಿದು ಡೈರೆಕ್ಟೆಡ್ ಎನರ್ಜಿ ವೆಪನ್? ಡೈರೆಕ್ಟೆಡ್‌ ಎನರ್ಜಿ ವೆಪನ್‌ನಲ್ಲಿ (ಡಿಇಡಬ್ಲ್ಯು) ಲೇಸರ್, ಮೈಕ್ರೋವೇವ್ ಅಥವಾ ಪಾರ್ಟಿಕಲ್ ಬೀಮ್‌ಗಳನ್ನು ಬೆಳಕಿನ ವೇಗದಲ್ಲಿ ಹರಿಸುವ ಮೂಲಕ ಶತ್ರುಗಳ ಡ್ರೋನ್, ಕ್ಷಿಪಣಿ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಾಶ ಪಡಿಸಲಾಗುತ್ತದೆ. ಇದರಲ್ಲಿ ಕೆಲವು ವಿಧಗಳು ಇವೆ. ಆ ಪೈಕಿ ನಿಗೂಢ ಶಬ್ದಾಸ್ತ್ರವೂ ಒಂದು. ಈ ಶಬ್ದಾಸ್ತ್ರದಲ್ಲಿ ಶತ್ರುಗಳನ್ನು ಹಿಮ್ಮೆಟ್ಟಿಸಲು ಅಥವಾ ಅಶಕ್ತರನ್ನಾಗಿ ಮಾಡಲು ತೀವ್ರವಾದ ಶಬ್ದ ತರಂಗಗಳನ್ನು ಬಳಸಲಾಗುತ್ತದೆ. ಇವುಗಳಿಗೆ ಶತ್ರುಗಳ ರೇಡಾರ್‌, ಸಂವಹನ ವ್ಯವಸ್ಥೆ ಮತ್ತು ಎಲೆಕ್ಟ್ರಾನಿಕ್ ಸರ್ಕ್ಯೂಟ್‌ಗಳನ್ನು ನಾಶ ಪಡಿಸುವ ಸಾಮರ್ಥ್ಯವಿದೆ.

ಇತರೆ ಸುದ್ದಿಗಳು

ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ, ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ

Views : 1618+

ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ ?

Views : 1848+

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು

Views : 4311+

ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ 6 ಬಂಪರ್ ಘೋಷಣೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ!

Views : 4489+

ಮೊನಾಲಿಸಾ ಪ್ರಬುದ್ಧಳಾಗಿದ್ದಾಳೆ – ಪತಿಗೆ ಟ್ರಾನ್ಸಿಟ್ ಬೇಲ್‌ ಮಂಜೂರು ಮಾಡಿದ ಕೇರಳ ಹೈಕೋರ್ಟ್

Views : 4510+

ನೂತನ ಸಿಎಂಗೆ ಇಚ್ಛಾಶಕ್ತಿ ಕೊರತೆ ಇದೆ: ಸಿ.ಟಿ.ರವಿ

Views : 4589+

ದೇಶದ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ ಡಿಕೆಶಿ

Views : 7068+

ಇರಾನ್ ಮೇಲೆ ಅಮೆರಿಕ ವಾಯುದಾಳಿ! ರಕ್ಷಣಾತ್ಮಕ ದಾಳಿಗೆ ನಿಯಂತ್ರಣ ಕೇಂದ್ರ ಉಡೀಸ್ ...

Views : 7549+

ದಾವಣಗೆರೆಯ ಕೆ ಟಿ ಜಿ ನಗರ ಅವ್ಯವಸೆಯ ಆಗರ ! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

Views : 7587+

ಡಿ.ಕೆ.ಶಿವಕುಮಾರ್ ಅವರಿಂದ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್

Views : 12782+

ಸಂಪುಟ ರಚನೆಗೆ ಕ್ಷಣಗಣನೆ. ಡಿಕೆಶಿ, ಸಿದ್ದು ದೆಹಲಿಗೆ...

Views : 12906+

ಸತತ 2ನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ RCB...

Views : 13181+

ಹಿಮಾಚಲದಲ್ಲಿ ಭಯಾನಕ ಅಪಘಾತ! ಪ್ರಪಾತಕ್ಕೆ ಬಿದ್ದ ಕಾರ್ ....

Views : 13202+

ರಾಜ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್​​...! ಮುಂದಿನ ಸಿ ಎಂ ಯಾರು ?

Views : 27170+

ಚಾಮುಂಡಿ ತಾಯಿ ಮುಂದೆ ಕ್ಷಮೆ ಬೇಡಿದ ರಣ್ವೀರ್ ಸಿಂಗ್...

Views : 30208+

ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

Views : 30228+

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ: ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್...

Views : 30257+

ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ , ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

Views : 33261+

ಟ್ರಂಪ್ ಪುತ್ರಿ ಇವಾಂಕಾ ಹತ್ಯೆಗೆ ಸಂಚು...!

Views : 33266+

ವಾಹನ ಸವಾರರಿಗೆ ಬಿಗ್ ಶಾಕ್ ! ಸತತ 4ನೇ ಭಾರಿ ತೈಲ ಬೆಲೆ ಏರಿಕೆ ...

Views : 33388+

ಬಿಗ್ ಬಾಸ್ ಸ್ಪರ್ದಿ ನಿರೂಪಕಿ ಜಾಹ್ನವಿ ಜೆಡಿಎಸ್ ಗೆ ಸೇರ್ಪಡೆ ...!

Views : 33482+

ಗಂಡನ ಪ್ರಾಣ ತೆಗೆದ ಹೆಂಡತಿಯ ಕಳ್ಳಾಟ ಬಯಲು ....! ಅನೈತಿಕ ಸಂಬಂಧಕ್ಕೆ ಗಂಡ ಬಲಿ

Views : 33513+

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ! ಹತ್ತು ದಿನದಲ್ಲಿ 3 ನೇ ಭಾರಿ ಏರಿಕೆ

Views : 39059+

ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮಾನವ ಸರಪಳಿ ಪ್ರತಿಭಟನೆಗೆ ಪೊಲೀಸರ ಬ್ರೇಕ್!

Views : 39148+